ಮೈಸೂರು,ಡಿಸೆಂಬರ್,12,2024 (www.justkannada.in): ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಂತ್ಯಕ್ರಿಯೆಯನ್ನ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಬಗ್ಗೆ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ಮೈಸೂರಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಂತ್ಯ ಸಂಸ್ಕಾರವನ್ನ ರಾಜ್ಯ ಸರ್ಕಾರ ಬಹಳ ಗೌರವಯುತವಾಗಿ ನಡೆಸಿಕೊಟ್ಟಿದೆ. ಅವರನ್ನ ಅತ್ಯಂತ ಗೌರವದಿಂದ ಬೀಳ್ಕೊಟ್ಟಿದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿತು.ಹಾಗಾಗಿ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶ್ಲಾಘಿಸಿದರು.
ಸೋನಿಯಾಗಾಂಧಿ ವಿರುದ್ದ ಅಸಮಾಧಾನ
ಇದೇ ವೇಳೆ ಸೋನಿಯಾ ಗಾಂಧಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಹೆಚ್. ವಿಶ್ವನಾಥ್, ಕೇಂದ್ರದಲ್ಲಿ ಪ್ರಧಾನಿ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಆದರೆ ಕಾಂಗ್ರೆಸ್ ಅಧಿನಾಯಕಿ ಸೌಜನ್ಯಕ್ಕೂ ಸಂತಾಪ ಸೂಚಿಸಿಲ್ಲ, ಎಸ್.ಎಂ ಕೃಷ್ಣ ಅವರ ಬಗ್ಗೆ ತುಟಿಯನ್ನೇ ಬಿಚ್ಚಿಲ್ಲ ಇದು ವಿಷಾದನೀಯ. ಈ ಹಿಂದೆ ದೇವರಾಜು ಅರಸು ನಿಧನಕ್ಕೂ ಕೂಡ ಕಾಂಗ್ರೆಸ್ ನಾಯಕರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಸೋನಿಯಾ ಗಾಂಧಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಎಸ್.ಎಂ ಕೃಷ್ಣ ಅವರ ಕೊಡುಗೆ ಅಪಾರ. ಬೆಂಗಳೂರನ್ನ ಐಟಿ ಬಿಟಿ ಸಿಟಿ ಮಾಡಿದ್ದು,ಮೈಸೂರನ್ನ ಹೆರಿಟೇಜ್ ಸಿಟಿಯಾಗಿ ಬಿಂಬಿಸಿದ್ದು ಎಸ್ಎಂ ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ಎಸ್.ಎಂ ಕೃಷ್ಣರ ಆಡಳಿತ, ಅಭಿವೃದ್ಧಿ ಕಾರ್ಯ ವೈಖರಿಯನ್ನ ವಿಶ್ವನಾಥ್ ಹೊಗಳಿದರು
ಪಂಚಮಶಾಲಿ ಮೀಸಲಾತಿ ಹೋರಾಟ: ಬಿಜೆಪಿ ವಿರುದ್ದ ಹೆಚ್ ವಿಶ್ವನಾಥ್ ಕಿಡಿ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬಸವಜಯಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಹೋರಾಟಕ್ಕೆ ಕಿಡಿಕಾರಿದ ಎಂಎಲ್ ಸಿ ಹೆಚ್ ವಿಶ್ವನಾಥ್, ಹೋರಾಟದಿಂದ ಸಮಾಜ – ಸಮಾಜಗಳ ನಡುವೆ ಅಪನಂಬಿಕೆ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಸ್ವಾಮೀಜಿಗಳ ಅಗತ್ಯ ಬೇಕಿತ್ತಾ? 2ಎ ಮೀಸಲಾತಿ ಈಗಾಗಲೇ ಮುಗಿದುಹೋಗಿದೆ. ಅದರಲ್ಲಿ ಹಲವಾರು ಸಮುದಾಯಗಳು ಈಗಾಗಲೇ ತುಂಬಿಕೊಂಡಿವೆ. ಅದಕ್ಕೆ ಈಗ ಯಾವುದೇ ಮಾನದಂಡ ಕಾಣಿಸುತ್ತಿಲ್ಲ, ಸರ್ಕಾರ ಮೊದಲು ಇದನ್ನು ಸರಿಪಡಿಸಲಿ. ಬೇಕಿದ್ದರೆ ಕುರುಬರನ್ನು ಸೇರಿದಂತೆ ಎಲ್ಲರನ್ನು ಎಸ್ಟಿಗೆ ಸೇರಿಸಿಬಿಡಿ. ಮಿಸಲಾತಿ ಪ್ರಮಾಣ ಜಾಸ್ತಿ ಮಾಡಬೇಕಿದೆ ಎಂದರು
ಪಂಚಮಶಾಲಿ ಹೋರಾಟಕ್ಕೆ ಬಿಜೆಪಿ ಬೆಂಬಲ ವಿಚಾರ ಕುರಿತು ಹರಿಹಾಯ್ದ ಹೆಚ್.ವಿಶ್ವನಾಥ್, ರಾಜ್ಯದಲ್ಲಿ ಯಾವುದೇ ತತ್ವ ಸಿದ್ದಂತವಿಲ್ಲದ ಪಕ್ಷ ಎಂದರೆ ಅದು ಬಿಜೆಪಿ. ಅವರಿಗೆ ಯಾವುದಾರರೂ ತತ್ವ ಸಿದ್ದಂತಾದ ಮೇಲೆ ಇದ್ದಾರಾ.? ಎಲ್ಲದಕ್ಕೂ ಬೆಂಬಲ ನೀಡುವುದು ತಪ್ಪು ಎಂದು ವಾಗ್ದಾಳಿ ನಡೆಸಿದರು.
Key words: H. Vishwanath, Appreciation, state government