ಮೈಸೂರು, ಅಕ್ಟೋಬರ್ 30, 2022 (www.justkannada.in): ಪತ್ರಕರ್ತರಿಗೆ ಗಿಫ್ಟ್ ಬಾಕ್ಸ್ ನಲ್ಲಿ ಸ್ಕಾಚ್, ವಾಚು, ಹಣ ಹಂಚಿಕೆ ವಿಚಾರ ಕುರಿತು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ರೀತಿ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ? ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಸಿಕೊಂಡಿರುವ ಮಾಧ್ಯಮವನ್ನು ಈ ಮಟ್ಟಕ್ಕೆ ಬಳಸಿಕೊಂಡಿರುವು ಸರಿನಾ…? ಮಾಧ್ಯಮಗಳನ್ನು ನಾವೇ ಹಾಳು ಮಾಡುತ್ತಿದ್ದೇವ? ಕರ್ನಾಟಕ ಮಾಧ್ಯಮ ಬಹಳ ಪ್ರತಿಷ್ಠಿತ ಮಾಧ್ಯಮ. ಬಹಳ ದೊಡ್ಡ ಸಂಪ್ರದಾಯ ಪಾಲಿಸಿಕೊಂಡು ಬಂದ ಮಾಧ್ಯಮ. ಮುಖ್ಯಮಂತ್ರಿಗಳ ಕಚೇರಿಯಿಂದಲೇ ಈ ರೀತಿ ಮಾಡಿರುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಯಡಿಯೂರಪ್ಪ ಚೆಕ್ ಕೊಟ್ಟು ಸಿಕ್ಕಿಕೊಂಡಿದ್ರು. ಇದಕ್ಕೆ ಏನ್ ಹೇಳಬೇಕು. ಕರ್ನಾಟಕವನ್ನ ಎಲ್ಲಾ ಸೇರಿ ಮಾರಿಬಿಡೋಣ್ವೇ..? ಇದರ ಬಗ್ಗೆ ಸಿಎಂ ಮಾತಾಡಬೇಕು. ನಾನು ಮಾಧ್ಯಮಗಳ ಜೊತೆ ೪೦, ೫೦ ವರ್ಷಗಳಿಂದ ಅವಿನಾಭಾವ ಸಂಬಂಧ ಇಟ್ಟುಕೊಂಡು ಬಂದಿದ್ದೇನೆ. ಮುಖ್ಯಮಂತ್ರಿ, ಮಂತ್ರಿ ಕಚೇರಿಗಳಿಂದಲೇ ಈ ರೀತಿ ಆದರೆ ಏನ್ ಮಾಡೋದು ಎಂದು ಪ್ರಶ್ನಿಸಿದರು.
ಯಾರು ಈ ಕೃತ್ಯಕ್ಕೆ ಭಾಗಿಯಾಗಿದ್ರು ಅವರನ್ನು ಕಿತ್ತೆಸೆಯಬೇಕು. ಕೆಲ ಮಾಧ್ಯಮಗಳು ಕೊಟ್ಟ ಗಿಫ್ಟ್ ಬಾಕ್ಸ್ ವಾಪಸ್ ಮಾಡಿದ್ದಾರೆ. ಕೆಲವರು ಅವರೇ ಇಟ್ಟುಕೊಂಡಿದ್ದಾರೆ. ಪ್ರಜಾಪ್ರಭುತ್ವ ಅಂದರೆ ಏನು, ಚರ್ಚೆ, ಸಂವಾದ, ಬರವಣಿಗೆಗಳಿಗೆ ಅವಕಾಶ ಮಾಡಿಕೊಡಬೇಕು. ಸುದ್ದಿ ಕೊಡುವವರು ನಾವು ಸುದ್ದಿನ ಜನರಿಗೆ ತಿಳಿಸೋರು ನೀವು. ಸ್ವೀಟ್ ಕೊಡುವುದು ಒಂದು ಸಂಪ್ರದಾಯ ಕೊಡಲಿ. ಆದರೆ, ಕ್ಯಾಸ್, ಗೋಲ್ಡ್ , ವಾಚ್ ಸ್ಕಾಚ್ ಕೊಟ್ಟು ಪತ್ರಕರ್ತರ ದಿಕ್ಕು ತಪ್ಪಿಸುವುದು ಎಷ್ಟರ ಮಟ್ಟಿಗೆ ಸರಿ? ಈ ಕುರಿತು ತನಿಖೆ ಆಗಬೇಕು, ಯಾರು ಮಾಧ್ಯಮ ಕಾರ್ಯದರ್ಶಿ ಅಂಥಾ ಇದ್ದಾರೆ ಅವನ್ನನ್ನ ಕಿತ್ತೆಸೆಯಬೇಕು. ಅಂಥವರನ್ನ ಇಟ್ಟುಕೊಂಡು ಸರ್ಕಾರಕ್ಕೆ ಕೆಟ್ಟ ಹೆಸರು ಬರ್ತಾಇದೆ. ಮೊದಲು ಸಿಎಂ ಬೊಮ್ಮಾಯಿ ಈ ವಿಚಾರ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.