ಮೈಸೂರು,ಆಗಸ್ಟ್,29.2020(www.justkannada.in): ಟಿಪ್ಪು ಸ್ವತಂತ್ರ ಹೋರಾಟಗಾರ, ಈ ನೆಲದ ಮಣ್ಣಿನ ಮಗ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ಎಂಎಲ್ ಸಿ ವಿಶ್ವನಾಥ್ ಗೆ ಸ್ವಪಕ್ಷೀಯದವರೇ ಆದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ವಿಶ್ವನಾಥ್ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಆದರೆ ಅವರ ಪೂರ್ವಾಶ್ರಮ ಪ್ರಭಾವ ಇನ್ನೂ ಇದ್ದಂತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದೇನೆ ಎನ್ನುವವರು ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತಾನಾಡಬೇಕು ಎಂದು ಹೆಚ್.ವಿಶ್ವನಾಥ್ ಅವರಿಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಕಾಲಿಟ್ಟಿದ್ದಾರೆ. ಹಾಗಾಗಿ ಮೈಸೂರಿನ ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು. ಮೈಸೂರಿನ ಯದುವಂಶವನ್ನು ನಿರ್ನಾಮ ಮಾಡಲು ಹೊರಟವರು ಯಾರು.? ಕನ್ನಡ ಭಾಷೆಯ ಮೇಲೆ ಪ್ರಹಾರ ಮಾಡಿ ರೆವಿನ್ಯೂ ಡಿಪಾರ್ಟ್ ಮೆಂಟ್ ನಲ್ಲಿ ಖಾತೆ, ಬಗರ್ ಹುಕುಂ ಪದಗಳನ್ನ ತಂದಿದ್ದು ಯಾರು.? ಮೈಸೂರು ಸಾಮ್ರಾಜ್ಯವನ್ನ ಸುಭಿಕ್ಷಗೊಳಿಸಿದವರು. ಕನ್ನಂಬಾಡಿ ಕಟ್ಟೆ ಕಟ್ಟಿ ಜನರ ಹಿತ ಕಾಯ್ದವರು ಮೈಸೂರು ಅರಸರು. ಅಂತಹ ಮೈಸೂರು ರಾಜರನ್ನು ನಿರ್ನಾಮ ಮಾಡಲು ಹೊರಟವರು ಯಾರು..? ಎಂದು ಪ್ರಶ್ನೆ ಹಾಕಿದರು.
ಟಿಪ್ಪು ವೀರ ಶೂರ ಅಂತ ಹೇಳಲು ಸಾಧ್ಯವಿಲ್ಲ. ಟಿಪ್ಪು ಸತ್ತಾಗ ಸ್ವತಂತ್ರ ಹೋರಾಟವೇ ಶುರವಾಗಿರಲಿಲ್ಲ. ಹೆಚ್. ವಿಶ್ವನಾಥ್ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಆದರೆ ಅವರ ಪೂರ್ವಾಶ್ರಮ ಪ್ರಭಾವ ಇನ್ನೂ ಇದ್ದಂತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದೇನೆ ಎನ್ನುವವರು ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತಾನಾಡಬೇಕು ಎಂದು ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
Key words: H. Vishwanath- Tippu- statement -preemptive –influence-mysore- MP- Pratap Simha