ನೂತನ ಡಿಸಿ ಬಗಾದಿ ಗೌತಮ್ ಭೇಟಿ ಮಾಡಿದ ಹೆಚ್.ವಿಶ್ವನಾಥ್: ಹಿಂದಿನ ಜಿಲ್ಲಾಧಿಕಾರಿ ಮಾಡಿರುವ ಭೂ ಅಕ್ರಮ ಆದೇಶದ ಜಾರಿಗೆ ಮನವಿ.

ಮೈಸೂರು,ಜೂನ್,10,2021(www.justkannada.in): ಹಿಂದಿನ ಮೈಸೂರು ಜಿಲ್ಲಾಧಿಕಾರಿ ಮಾಡಿರುವ ಭೂ ಅಕ್ರಮ ಆದೇಶವನ್ನ ಜಾರಿಗೊಳಿಸುವಂತೆ ನೂತನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮನವಿ ಸಲ್ಲಿಸಿದರು.jk

ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂತನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವನರನ ಭೇಟಿ ಮಾಡಿದ ಎಂಎಲ್ ಸಿ ಎಚ್ ವಿಶ್ವನಾಥ್, ಜಿಲ್ಲಾಧಿಕಾರಿ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಹಾಗೆಯೇ ಹಿಂದಿನ ಜಿಲ್ಲಾಧಿಕಾರಿ ಮಾಡಿರುವ ಭೂ ಅಕ್ರಮ ಆದೇಶದ ಜಾರಿಗೆ ಮನವಿ ಸಲ್ಲಿಸಿದ ಅವರು ಭೂಗಳ್ಳ ದಂಧೆಯ ಬಗ್ಗೆ ಆರ್.ಟಿ.ಐ ಕಾರ್ಯಕರ್ತರು ಸಲ್ಲಿಸಿರುವ ದೂರನ್ನು ಗಂಭೀರವಾಗಿ ಪರಿಗಣಿಸುವಂತೆ ಪತ್ರ ಸಲ್ಲಿಸಿ ನೂತನ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಡಿಸಿ ಬಗಾದಿ ಗೌತಮ್ ಭೇಟಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ವಿಶ್ವನಾಥ್, ನಾಳೆ ಬೆಂಗಳೂರಿನಲ್ಲಿ ಸಿಎಂ ಮತ್ತು ಸಿಎಸ್ ಭೇಟಿ ಮಾಡುತ್ತೇನೆ. ಮೈಸೂರು ಸುತ್ತ ಮುತ್ತ ಭೂ ಹಗರಣ ವಿಚಾರ ಸಂಬಂಧ ರೋಹಿಣಿ ಸಿಂಧೂರಿಯನ್ನು ವಿಶೇಷಾಧಿಕಾರಿಯಾಗಿ ನೇಮಿಸಲು ಮನವಿ ಮಾಡುತ್ತೇನೆ. ಚಾಮುಂಡಿಬೆಟ್ಟದ ಸುತ್ತ ಮುತ್ತ ಸಹ ಒತ್ತುವರಿಯಾಗಿದೆ. ಹೀಗಾಗಿ 6 ತಿಂಗಳ‌ ಕಾಲ ರೋಹಿಣಿ ಸಿಂಧೂರಿ ಅವರನ್ನು ನೇಮಿಸಲು ಒತ್ತಾಯ ಮಾಡುತ್ತೇನೆ ಎಂದರು.

ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಭೂ ಅಕ್ರಮದ ಬಗ್ಗೆ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಇದನ್ನು ತುರ್ತಾಗಿ ಜಾರಿಗೊಳಿಸುವಂತೆ ಮನವಿ ಸಲ್ಲಿಸಿದ್ದೇನೆ. ನಾಲ್ಕು ಆದೇಶಗಳನ್ನು ಹಿಂದಿನ ಡಿಸಿ ಮಾಡಿದ್ದಾರೆ. ಅದರ ಪ್ರತಿಗಳನ್ನು ಮನವಿ ಪತ್ರದ ಜೊತೆ ಸಲ್ಲಿಸಿದ್ದೇನೆ. ನಾಲ್ಕು ಪ್ರಕರಣಗಳು ಮಾತ್ರವಲ್ಲ ಇಂತಹ ಹಲವು ಪ್ರಕರಣಗಳಿವೆ. ಸುಪ್ರೀಂಕೋರ್ಟ್ ಆದೇಶ ಇದೆ. ಬಫರ್ ಜೋನ್ ನಲ್ಲಿ ಯಾವುದೇ ಮನೆ ಕೈಗಾರಿಕೆ ಬರುವಂತಿಲ್ಲ. ಇಲ್ಲಿ ಬಪರ್ ಜೋನ್‌ ನಲ್ಲಿ ಅಕ್ರಮ ನಡೆಸಲಾಗುತ್ತಿದೆ.ಇದರ ಬಗ್ಗೆ ನಿಗದಿತ ಅವಧಿಯಲ್ಲಿ ಕ್ರಮಕ್ಕೆ ಮನವಿ ಮಾಡಿದ್ದೇನೆ ಎಂದರು.

ಕೊರೊನಾ ಓಡಿಸಿ ಅಂತಾ ಕರೆ ನೀಡಿದ್ರೆ ಇವರೆಲ್ಲಾ ಸೇರಿ ಐಎಎಸ್ ಅಧಿಕಾರಿಗಳನ್ನು ಓಡಿಸುತ್ತಿದ್ದಾರೆ.

ಕೊರೋನಾ ಓಡಿಸಿ ಅಂತಾ ಸಿಎಂ ಪಿಎಂ ಕರೆ ನೀಡಿದ್ದರು. ಆದರೆ ಇವರೆಲ್ಲಾ ಸೇರಿ ಐಎಎಸ್ ಅಧಿಕಾರಿಗಳನ್ನು ಓಡಿಸುತ್ತಿದ್ದಾರೆ. ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಸಿಂಧೂರಿಗೆ ಶೂಟ್ ಮಾಡಿದ್ದಾರೆ. ಹಾಸನದಿಂದ ಇಲ್ಲಿ ಬಂದು ಪ್ರೆಸ್‌ಮೀಟ್ ಮಾಡುತ್ತಾರೆ ಏನಾಗಿದೆ ಮೈಸೂರಿಗೆ.? ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು.

ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಾಣ ಆಗಿದೆ. ಒಂದು ಗುಂಟೆ ಅಲ್ಲ ಸಾವಿರಾರು ಎಕರೆ ಹೋಗಿದೆ. ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಕೊರೊನಾ ಓಡಿಸುವ ಬದಲು ಅಧಿಕಾರಿ ಓಡಿಸಿದರು. ರೋಹಿಣಿ ಸಿಂಧೂರಿ ಶಿಲ್ಪಾನಾಗ್ ಒಳ್ಳೆಯ ಅಧಿಕಾರಿ . ಇಬ್ಬರು ಐಎಎಸ್ ಅಧಿಕಾರಿಗಳ‌ನ್ನು ಹೊರ ಹಾಕಿದ್ದು ರಾಜಕಾರಣಿಗಳ‌ ಸ್ವಾರ್ಥ ಎಂದು ಹೆಚ್. ವಿಶ್ವನಾಥ್ ಕಿಡಿಕಾರಿದರು.

ಏಕೆ ಹೆದರಿಕೆ ತನಿಖೆ ಮಾಡಲಿ ತನಿಖೆಯಾಗಲು ಬಿಡಿ…

ಏಕೆ ಹೆದರಿಕೆ ತನಿಖೆ ಮಾಡಲಿ ತನಿಖೆಯಾಗಲು ಬಿಡಿ. ನನ್ನ ಸ್ನೇಹಿತರಿಗೂ ಮನವಿ ಮಾಡುತ್ತೇನೆ. ನಾನು ಮತ್ತೆ ಅವರನ್ನು ಜಿಲ್ಲಾಧಿಕಾರಿ ಮಾಡಿ ಅಂತಾ ಹೇಳುವುದಿಲ್ಲ. ನಾನು ಸಾ.ರಾ ಮಹೇಶ್ ಅವರ ಪ್ರತಿಭಟನೆಯನ್ನು ಸ್ವಾಗತಿಸುತ್ತೇನೆ. ಸಾ ರಾ ಕಲ್ಯಾಣಮಂಟಪದ ಬಗ್ಗೆ ದಾಖಲೆ ಕೊಡಲಿ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಈಗ ರಿಯಲ್ ಎಸ್ಟೇಟ್ ಇಂಡಸ್ಟ್ರಿಯಾಗಿದೆ. ಸಾ ರಾ ಮಹೇಶ್ ಯಾವ ಇಂಡಸ್ಟ್ರಿಲಿಯಸ್ಟ್ ಮುಡಾ ಅಧ್ಯಕ್ಷ ಯಾವ ಇಂಡಸ್ಟ್ರಿ ಮಾಡಿದ್ದಾರೆ. ಎಷ್ಟು ಜನಕ್ಕೆ ಉದ್ಯೋಗ ನೀಡಿದ್ದಾರೆ. ಶಿಲ್ಪಾನಾಗ್ ಇಲ್ಲಿ ಬಲಿಪಶುವಾಗಿದ್ದಾರೆ. ತಮ್ಮ ಉದ್ದೇಶದ ಬಗ್ಗೆ ಶಿಲ್ಪಾನಾಗ್ ಹೇಳಿದ್ದಾರೆ ನಿಮ್ಮ ಕಮಿಷನ್ ಏನು? ರೋಹಿಣಿ ಸಿಂಧೂರಿಯವರ ವರ್ಗಾವಣೆ ನಿಮ್ಮ ಕಮಿಷನ್ ? ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು.

Key words: H. Vishwanath- visit-mysore- new DC- Bagadi Gautam-Appeal