ಬೆಂಗಳೂರು,ಜು,6,2019(www.justkannada.in): ಸರ್ಕಾರದ ನಡೆ, ನಿರ್ಲಕ್ಷ್ಯ ಧೋರಣೆ ವಿರುದ್ದ ಆನಂದ್ ಸಿಂಗ್ ಸೇರಿ 14 ಮಂದಿ ರಾಜೀನಾಮೆ ನೀಡಿದ್ದೇವೆ ಎಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ ಬಳಿಕ ರಾಜಭವನಕ್ಕೆ 12 ಮಂದಿ ಅತೃಪ್ತ ಶಾಸಕರು ತೆರಳಿ ರಾಜ್ಯಪಾರನ್ನ ಭೇಟಿಯಾದರು. ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಹೆಚ್.ವಿಶ್ವನಾಥ್, ಸಮ್ಮಿಶ್ರ ಸರ್ಕಾರ ಜನರ ಆಶೋತ್ತರಗಳನ್ನ ಈಡೇರಿಸುವಲ್ಲಿ ವಿಫಲವಾಗಿದೆ. ಉಭಯ ಪಕ್ಷದ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ನಮ್ಮ ಮನವಿಗಳಿಗೆ ಸಮ್ಮಿಶ್ರ ಸರ್ಕಾರ ಸ್ಪಂದಿಸಲೇ ಇಲ್ಲ. ಹೀಗಾಗಿ ಒಟ್ಟು 14 ಮಂದಿ ರಾಜೀನಾಮೆ ನೀಡಿದ್ದೇವೆ ಎಂದರು.
ನಾವು ಯಾವುದೇ ಅಪರೇಷನ್ ಕಮಲಕ್ಕೆ ಒಳಗಾಗಿಲ್ಲ. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಸಂಪೂರ್ಣ ಸತ್ತು ಹೋಗಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರದ ವಿರುದ್ದ ಉಭಯ ಪಕ್ಷದ ಶಾಸಕರು ಈ ನಿರ್ಧಾರ ಕೈಗೊಂಡಿದ್ದೇವೆ. ರಾಜೀನಾಮೆ ಅಂಗೀಕರಿಸುವಂತೆ ಪ್ರತ್ಯೇಕ ಪತ್ರವನ್ನು ನೀಡಿದ್ದೇವೆ ಎಂದು ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ಮುಂಬೈಗೆ ಅತೃಪ್ತ ಶಾಸಕರು ಶಿಫ್ಟ್…
ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ, ಕಾಂಗ್ರೆಸ್ ಶಾಸಕರಾದ ರಾಮಲಿಂಗರೆಡ್ಡಿ, ಬಿಸಿಪಾಟೀಲ್, ಮಹೇಶ್ ಕುಮುಟಳ್ಳಿ, ನಾಗೇಂದ್ರ, ಭೈರತಿ ಬಸವರಾಜ್, ಎಸ್ ಟಿ ಸೋಮಶೇಖರ್, ಮುನಿರತ್ನ ಸೇರಿ 12 ಮಂದಿ ಅತೃಪ್ತರು ಮುಂಬೈಗೆ ಶಿಫ್ಟ್ ಆಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
summary
H Vishwanath: we have submitted resignation to the speaker
Speaker has assured he will take a decision by Tuesday
The reason for this tough decision is that the coalition govt has failed to meet the aspirations of the people
The people’s disappointments are a aplenty
The government did not take everyone into confidence in its functioning. This has hurt us.
This coalition govt has killed education
Thats why today, voluntarily, have resigned against the misgovernance of the govt
Key words: H. Viswanath- – resignation – reason- Coalition government