ಮೈಸೂರು,ಏಪ್ರಿಲ್,21,2025 (www.justkannada.in): ಏಪ್ರಿಲ್ 29 ರಿಂದ ರಾಜ್ಯದಿಂದ ಹಜ್ ಯಾತ್ರೆ ಆರಂಭವಾಗಲಿದ್ದು ಮೈಸೂರಿನಲ್ಲಿ ಹಜ್ ಯಾತ್ರಾರ್ಥಿಗಳಿಗೆ ವಿಶೇಷ ಲಸಿಕೆ ಶಿಬಿರ ಮತ್ತು ವಿಶೇಷ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಗಿತ್ತು.
ರಾಜ್ಯದಿಂದ ಸುಮಾರು 8600 ಕ್ಕೂ ಹೆಚ್ಚು ಯಾತ್ರಾರ್ಥಿಗಳ ಪ್ರವಾಸ ಕೈಗೊಡಿದ್ದು, ಯಾತ್ರಾರ್ಥಿಗಳಿಗೆ ಯಾವುದೇ ರೋಗ ರುಜುನೆ ಬಾರದಂತೆ ಮುನ್ನೆಚ್ಚರಿಕೆಯಾಗಿ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಯಾತ್ರಾರ್ಥಿಗಳಿಗೆ ಲಸಿಕಾ ಶಿಬಿರ ನಡೆಸಲಾಯಿತು.
ಮೈಸೂರಿನಿಂದಲೂ 600 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಹಜ್ ಯಾತ್ರೆ ಕೈಗೊಂಡಿದ್ದು, ಲಸಿಕಾ ಶಿಬಿರದಲ್ಲಿ ನೂರಾರು ಜನ ಭಾಗಿಯಾಗಿದ್ದರು.
ಯಾತ್ರಾರ್ಥಿಗಳಿಗೆ ವಿಶೇಷ ಕಾರ್ಯಗಾರ
ಹಜ್ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳಿಗೆ ಮೈಸೂರಿನಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ ವಿಶೇಷ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಹಜ್ ಯಾತ್ರೆ ಛೇರ್ಮನ್ ಜುಲ್ಫಿಕರ್ ಟಿಪ್ಪು ನೇತೃತ್ವದಲ್ಲಿ ವಿಶೇಷ ಕ್ಯಾಂಪ್ ಆಯೋಜನೆ ಮಾಡಲಾಗಿತ್ತು.
ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡುಗು ಭಾಗದ ಹಜ್ ಯಾತ್ರಾರ್ಥಿಗಳು ಭಾಗಯಾಗಿದ್ದರು. ಹಜ್ ಯಾತ್ರೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕಾರ್ಯಗಾರದಲ್ಲಿ ಮಾಹಿತಿ ನೀಡಲಾಯಿತು.
ಸೌದಿ ಅರೇಬಿಯಾ ಸರ್ಕಾರದಲ್ಲಿ ಇರುವ ನೀತಿ, ನಿಯಮಗಳ ಅನುಸಾರ ಯಾತ್ರಾರ್ಥಿಗಳು ಯಾವ ರೀತಿ ನಡೆದುಕೊಳ್ಳಬೇಕು, ಎಲ್ಲಿ ತಂಗಬೇಕು, ಹೇಗೆ ಆರೋಗ್ಯ ನೋಡಿಕೊಳ್ಳಬೇಕು ಎಂಬ ಇತ್ಯಾದಿ ಮಾಹಿತಿಗಳ ಸಂಪನ್ಮೂಲ ವ್ಯಕ್ತಿಗಳು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಅಯೂಬ್ ಖಾನ್ ಹಜ್ ಯಾತ್ರೆ ಛೇರ್ಮನ್ ಜುಲ್ಫಿಕರ್ ಟಿಪ್ಪು ಸೇರಿದಂತೆ ಮೈಸೂರು ಭಾಗದ ನೂರಾರು ಹಜ್ ಯಾತ್ರಾರ್ಥಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
Key words: Vaccination camp, special workshop, Haj pilgrims, Mysore