ಬೆಂಗಳೂರು,ಮಾರ್ಚ್,29,2022(www.justkannada.in): ಹಲಾಲ್ ಎಂಬುದು ಆರ್ಥಿಕ ಜಿಹಾದ್, ಅದನ್ನ ಬಹಿಷ್ಕರಿಸುವ ಹಕ್ಕು ನಮಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಆರ್ಥಿಕ ಜಿಹಾದ್ ಅಂದರೆ ಮುಸ್ಲಿಮರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಅಂತ ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಾರೆ. ಹಲಾಲ್ ಮಾಂಸವನ್ನು ಉಪಯೋಗಿಸಬಾರದು ಅಂದರೆ ತಪ್ಪೇನು? ಹಲಾಲ್ ಮಾಂಸ ಅವರ ದೇವರಿಗೆ ಒಪ್ಪಿಸಿದ್ದು ಅವರಿಗೆ ಪ್ರಿಯ, ನಮ್ಮ ದೇವರಿಗೆ ಎಂಜಲು. ಒಬ್ಬ ಹಿಂದೂ ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಬಂದು ತೆಗೆದುಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದರು.
ಹಲಾಲ್ ಮಾಂಸ ಉಪಯೋಗಿಸಿ ಅಂತ ಹೇಗೆ ಹೇಳುವ ಹಕ್ಕು ಇದೆಯೋ ಹಾಗೇ. ಅದನ್ನ ಬಹಿಷ್ಕಾರಿಸಿ ಅಂತ ಹೇಳುವ ಹಕ್ಕು ನಮಗಿದೆ. ಹಲಾಲ್ ಅಂದರೆ ಮುಸ್ಲಿಂರ ಧಾರ್ಮಿಕ ಕ್ರಿಯೆ. ಅದು ಅವರಿಗೆ ಪ್ರಿಯವಾಗಿರುತ್ತದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಅಂತ ಏನಾದರೂ ಇದ್ಯಾ? ಸಾಮರಸ್ಯವನ್ನು ಹೇರುವುದಕ್ಕೆ ಬರುವುದಿಲ್ಲ. ಸಾಮರಸ್ಯ ಒನ್ ವೇ ಅಲ್ಲ, ಅದು ಟೂ ವೇ ಎಂದು ಸಿಟಿ ರವಿ ಹೇಳಿದರು.
Key words: Halal – economic jihad – former minister -CT Ravi