ಬೇಕಾದ ಪದಾರ್ಥಗಳು
ಹಾಲು – 1 1/2 ಲೋಟ
ನೀರು – 1 ಲೋಟ
ಗೋದಿ ಹಿಟ್ಟು – 1 ಲೋಟ
ಅಕ್ಕಿ ಹಿಟ್ಟು – 1 ಲೋಟ
ಬೆಲ್ಲದ ಪುಡಿ – 1 ಲೋಟ
ತುಪ್ಪ – 1 ಲೋಟ
ಏಲಕ್ಕಿ – 2
ಜಾಯಿಕಾಯಿ ಪುಡಿ – ಒಂದು ಚಿಟಿಕೆ
ಗಸಗಸೆ – 1 ಚಮಚ
ಮಾಡುವ ವಿಧಾನ
ಅಕ್ಕಿ ಹಿಟ್ಟು, ಗೋದಿ ಹಿಟ್ಟಿಗೆ ಎರಡು ಮೂರು ಚಮಚ ತುಪ್ಪ ಹಾಕಿ ಸ್ವಲ್ಪ ಹುರಿದು ತೆಗೆದಿಡಿ. ನೀರು ಹಾಲು ಸೇರಿಸಿ ಚೆನ್ನಾಗಿ ಕಾಯಿಸಿ, ಸಣ್ಣ ಉರಿ ಇಟ್ಟು ಹಿಟ್ಟು ಹಾಕಿ. ಬೆಲ್ಲದ ಪುಡಿ, ತುಪ್ಪ ಸೇರಿಸಿ ತಿರುವಿ ಹಾಕಿ. ಬೆಲ್ಲ ಕರಗಿ ಎಲ್ಲಾ ಸೇರಿ ಒಂದಾಗಿ ಮುದ್ದೆಯಾಗಿ ಏಳುವಾಗ ಒಲೆ ಆರಿಸಿ.
ಏಲಕ್ಕಿ ಜಾಯಿಕಾಯಿ ಪುಡಿ ಮಾಡಿ ಹಾಕಿ ಇನ್ನೊಮ್ಮೆ ಕಲಸಿ. ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿ ಕುದಿಸಿದ ಮಿಶ್ರಣ ಹಾಕಿ ಹರಡಿ. ಕೈಯಿಂದ ಸ್ವಲ್ಪ ತಟ್ಟಿ, ಮೇಲೆ ಗಸಗಸೆ ಉದುರಿಸಿ ತಣ್ಣಗಾದ ಮೇಲೆ ಚೌಕಾಕಾರ ಕತ್ತರಿಸಿ.
ಈಗ ಹಾಲಗಡುಬು ಸವಿಯಲು ಸಿದ್ದ. ತುಂಬಾ ಮತ್ತಗೆ ಹಾಗೂ ರುಚಿಯಾದ ಈ ಸಿಹಿಯನ್ನು ಮಳೆಗಾಲದಲ್ಲಿ ಸವಿಯುವುದು ಆರೋಗ್ಯಕ್ಕೆ ಒಳ್ಳೆಯದು.