ಮುಂಬೈ, ಜುಲೈ 19, 2019 (www.justkannada.in): ಸಚಿನ್ ತೆಂಡುಲ್ಕರ್ ಗೆ ಐಸಿಸಿ ಹೊಸತೊಂದು ಗೌರವ ನೀಡಿ ಪುರಸ್ಕರಿಸಿದೆ.
ಹೌದು. ಲಿಟಲ್ ಮಾಸ್ಟರ್ ಗೆ ಐಸಿಸಿ ತನ್ನ ಅತ್ಯುನ್ನತ ʼ ಹಾಲ್ ಆಫ್ ಫೇಮ್ʼ ಗೌರವ ನೀಡಿದೆ. 46 ವರ್ಷದ ಸಚಿನ್ ತೆಂಡುಲ್ಕರ್ ಈ ಅತ್ಯನ್ನತ ಗೌರವ ಪಡೆದ ಆರನೇ ಭಾರತೀಯ.
ಈ ಮೊದಲು ಸುನೀಲ್ ಗಾವಸ್ಕರ್, ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್, ಅನಿಲ್ ಕುಂಬ್ಳೆ, ಮತ್ತು ರಾಹುಲ್ ದ್ರಾವಿಡ್ ಈ ಗೌರವಕ್ಕೆ ಪಾತ್ರರಾಗಿದ್ದರು.