ಬೆಂಗಳೂರು,ಜನವರಿ,31,2021(www.justkannada.in) : ನಾವೇನು ಕೈಯಲ್ಲಿ ಬಳೆ ಹಾಕಿಕೊಂಡು ಕುಳಿತಿದ್ದೇವಾ?, ರಾಜೀನಾಮೆ ಪತ್ರ ರೆಡಿ ಮಾಡಿಕೊಂಡು ರಾಜ್ಯಾಧ್ಯಕ್ಷರಿಗೆ, ಸಂಘಟನಾ ಕಾರ್ಯದರ್ಶಿಗೆ ನೀಡೋಣ. ನಮ್ಮ ಕ್ಷೇತ್ರದಲ್ಲಿ ನಾವೇ ರಾಜರು ಇದ್ದ ಹಾಗೆ ಎಂದು ಖಾನಾಪುರದ ಬಿಜೆಪಿ ಕಾರ್ಯಕರ್ತರು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅರವಿಂದ ಪಾಟೀಲ್ ಹೇಳಿಕೆ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ಮುಂದಿನ ಬಿಜೆಪಿ ಅಭ್ಯರ್ಥಿ ಎಂಬ ಹೇಳಿಕೆಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಈ ಕುರಿತು ಪತ್ರ ಬರೆಯಲು ನಿರ್ಧರಿಸಿದ್ದರೆ. ಕ್ಷೇತ್ರದ ಬಿಜೆಪಿ ನಾಯಕರು ಸಭೆ ಸಭೆ ಸೇರಿ ಉಪಮುಖ್ಯಮಂತ್ರಿಗಳ ವಿರುದ್ಧ ಖಾನಾಪುರದ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಅರವಿಂದ ಪಾಟೀಲ್ ಖಾನಾಪುರ ಕ್ಷೇತ್ರದ ಎಂಇಎಸ್ ಮಾಜಿ ಶಾಸಕರಾಗಿದ್ದು,ಅವರನ್ನು ಮುಂದಿನ ಚುನಾವಣೆ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎಂದು ಲಕ್ಷ್ಮಣ ಸವದಿ ಹೇಳಿರುವುದು ಅಕ್ರೋಶಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಅರವಿಂದ ಪಾಟೀಲ್ ಸವದಿ ಮನೆಯಲ್ಲಿ ಪಾತ್ರೆ ತೊಳೀತಾನೆ, ಅರಿವೆ ಒಗೀತಾನೆ. ಸವದಿ ತನ್ನ ವೈಯಕ್ತಿಕ ಲಾಭಕ್ಕಾಗಿ ಅರವಿಂದ ಪಾಟೀಲ್ ಹೆಸರು ಹೇಳುತ್ತಿದ್ದಾರೆ. ನಾಟಕೀಯ ಹಾಗೂ ಢೋಂಗಿ ರಾಜಕಾರಣ ಮಾಡುತ್ತಿದ್ದಾರೆ” ಎಂದು ಖಾನಾಪುರದ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ವಾರ್ಥ ರಾಜಕಾರಣ ಮಾಡುತ್ತಿರುವ ಲಕ್ಷ್ಮಣ ಸವದಿ ವಿರುದ್ಧ ರಾಜ್ಯಾಧ್ಯಕ್ಷರಿಗೆ ಎಲ್ಲಾ ಕಾರ್ಯಕರ್ತರು ಸೇರಿ ಪತ್ರ ಬರೆಯೋಣ. ಲಕ್ಷ್ಮಣ್ ಸವದಿಗೆ ನಮ್ಮ ತಾಲೂಕು ರಾಜಕಾರಣದಲ್ಲಿ ಪ್ರವೇಶಿಸುವ ಹಕ್ಕಿಲ್ಲ” ಎಂದು ಖಾನಾಪುರ ಬಿಜೆಪಿ ಮುಖಂಡ ಪ್ರಮೋದ್ ಕೋಚರಿ ಹೇಳಿದ್ದಾರೆ.
key words : hand-Bangle-Wear-Sitting-down?-DCM Lakshmana Savadi-opposite-BJP activists-Outrage