ಬೆಂಗಳೂರು, ಜೂನ್ 02, 2021 (www.justkannada.in): ಕೋವಿಡ್ ಸಂಕಷ್ಟ ಕಾಲದಲ್ಲಿ ನೂರಾರು ಜನರಿಗೆ ನೆರವು ನೀಡುತ್ತಿರುವ ಹರ್ಷಿಕಾ ಕೊರೊನಾ ರೋಗಿಗಳೊಂದಿಗೆ ಮಾತುಕಥೆ ನಡೆಸಿದ್ದು, ಕೊಡವ ಡಾನ್ಸ್ ಮಾಡಿ ರಂಜಿಸಿದ್ದಾರೆ.
ಹೌದು. ಹರ್ಷಿಕಾ ಮತ್ತು ಭುವನ್ ನೇರವಾಗಿ ಕೊರೊನಾ ಸೋಂಕಿತರಿಗೆ ಆತ್ಮಸ್ತೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಹರ್ಷಿಕಾ ಹಾಗೂ ಭುವನ್ ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಕೊರೊನಾ ವಾರ್ಡ್ಗಳಿಗೆ ಭೇಟಿ ನೀಡಿದ್ದು, ಪಿಪಿಇ ಕಿಟ್ ಧರಿಸಿ 400 ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ.
ಯಾವುದೇ ಕಾರಣಕ್ಕೂ ಹೆದರಬೇಡಿ ಎಲ್ಲಾ ಒಳ್ಳೆಯದಾಗುತ್ತೆ ಎಂದು ಆತ್ಮಸ್ಥರ್ಯ ತುಂಬಿದ್ದಾರೆ. ಹರ್ಷಿಕಾ ಕೂಡ ರೋಗಿಗಳೊಂದಿಗೆ ಮಾತುಕಥೆ ನಡೆಸಿದ್ದು, ಕೊಡವ ಡಾನ್ಸ್ ಮಾಡಿ ಸೋಂಕಿತರನ್ನ ರಂಜಿಸಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.