ಹಾಸನ, ಮೇ 16, 2020 : (www.justkannada.in news ) ಕೋವಿಡ್ ಹಿನ್ನೆಲೆ ಕೇಂದ್ರ ಸರ್ಕಾರ ಹಲವು ಪ್ಯಾಕೇಜ್ ಘೋಷಣೆ ಮಾಡಿದೆ. ಆದ್ರೆ ಈ ಸಹಾಯ ಕೂಲಿಕಾರರು, ಮಹಿಳೆಯರು, ದಲಿತರಿಗೆ ಈ ಸಾಲದಾಗಿದೆ ಎಂದು ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮಗಳ ಜತೆ ಹಾಸನದಲ್ಲಿ ಶನಿವಾರ ಮಾತನಾಡಿದ ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹೇಳಿದಿಷ್ಟು….
ರಾಜ್ಯ ಸರ್ಕಾರದ 2200 ಕೋಟಿ ನೆರವೂ ಏನೇನು ಸಾಲಲ್ಲ. ಆಶಾ ಕಾರ್ಯಕರ್ತೆಯರು ಐವತ್ತು ದಿನ ಕೆಲಸ ಮಾಡಿದ್ದಾರೆ. ಅವರಿಗೆ 3 ಸಾವಿರ ಸಹಾಯ ಏನೇನು ಸಾಲೋದಿಲ್ಲ. ಆದ್ದರಿಂದ ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ 10 ಸಾವಿರ ಧನ ಸಹಾಯ ನೀಡಿ. ಎಲ್ಲಾ ವೃತ್ತಿ ಪರರಿಗೂ ನೆರವು ನೀಡಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕನಿಷ್ಟ ಹತ್ತು ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಿ ಎಂದು ಆಗ್ರಹಿಸಿದ ಅವರು, ಕೇಂದ್ರದಿಂದಲೂ ಕೇವಲ ಮೂಗಿಗೆ ತುಪ್ಪ ಸವರೊ ಕೆಲಸ ಆಗಿದೆ ಅಷ್ಟೇ. ನಿರ್ದಿಷ್ಟವಾಗಿ ಯಾವುದೇ ಜನರಿಗೆ ಕೇಂದ್ರದ ಪ್ಯಾಕೇಜ್ ನಿಂದ ಅನುಕೂಲ ಆಗಿಲ್ಲ.
ಯುಪಿಎ ಸರ್ಕಾರದ ಮಾದರಿಯಲ್ಲಿ ಮೋದಿಯವರು ಕೂಡ ರೈತರ ಸಾಲಾ ಮನ್ನಾ ಮಾಡಲಿ. ಕೇವಲ ರೈತರ ಕಣ್ಣೊರೆಸೊ ತಂತ್ರ ಬಿಟ್ಟು ನಿಜವಾದ ಯೋಜನೆ ಜಾರಿ ಮಾಡಿ ಎಂದು ಆಗ್ರಹ.
key words : hasan-jds-kumaraswamty-press.meet-demands-asha-workers-more-incentives