ಹಾಸನಾಂಬೆ ದೇಗುಲದ ಬಾಗಿಲು ಓಪನ್:  ಈ ಬಾರಿ 24 ಗಂಟೆಯೂ ದರ್ಶನಕ್ಕೆ ಅವಕಾಶ

ಹಾಸನ, ಅಕ್ಟೋಬರ್, 24,2024 (www.justkannada.in): ವರ್ಷಕ್ಕೆ ಒಂದೇ ಬಾರಿ ದರ್ಶನ ಕೊಡುವ ಹಾಸನಾಂಬೆ ದೇಗುಲದ ಗರ್ಭಗುಡಿ  ಬಾಗಿಲು ತೆರೆಯಲಾಗಿದ್ದು ಈ ಬಾರಿ 24 ಗಂಟೆಯೂ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ.

ಹಾಸನಾಂಬೆ ದೇಗುಲದ ಗರ್ಭಗುಡಿ ಬಳಿ ಪೂಜೆ ಮಾಡಿ ಅರಸು ಕುಟುಂಬಸ್ಥರು ಬಾಳೆ ಗಿಡ ಕಡಿದ ನಂತರ ದೇಗುಲದ ಬಾಗಿಲು ಓಪನ್ ಮಾಡಲಾಗಿದ್ದು ನಾಳೆಯಿಂದ 9 ದಿನಗಳ ಕಾಲ ನವೆಂಬರ್ 3ರವರೆಗೆ ಹಾಸನಾಂಬೆಯ ದರ್ಶನವಿರಲಿದೆ.

ಈ ಬಾರಿ 24 ಗಂಟೆಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಾಳೆ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 3 ರವರೆಗೆ ಭಕ್ತರು ದೇವಿಯ ದರ್ಶನ ಪಡೆಯಬಹುದಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ಸಕಲ ಸಿದ್ದತೆ ಮಾಡಿಕೊಂಡಿದೆ.

ದೇಗುಲದ ಬಾಗಿಲು ತೆರೆಯುವ ವೇಳೆ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು, ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳು ಸಚಿವ ಕೆ.ಎನ್ ರಾಜಣ್ಣ ಸೇರಿ ಹಲವರು ಉಪಸ್ಥಿತರಿದ್ದರು.

Key words: Hasanambe temple, open, devotees