ಹಾಸನ,ಜ,6,2020(www.justkannada.in): ಬಿಜೆಪಿಯಲ್ಲೇ 10ರಿಂದ 15 ಜನ ಹೊರ ಬರಲು ಸಿದ್ಧರಾಗಿದ್ದಾರೆ ಎಂಧು ಹೊಸ ಬಾಂಬ್ ಸಿಡಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಆದರೆ ನಾನು ಮತ್ತೊಮ್ಮೆ ಕೊಳಕಿಗೆ ಕೈ ಹಾಕಿಲ್ಲ. ಸರಕಾರ ತೆಗೆಯುವ ಪ್ರಯತ್ನವನ್ನೂ ಮಾಡಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ನಶ್ವರ ಎಂದು ಅರ್ಥಮಾಡಿಕೊಂಡು ಒಳ್ಳೆ ಕೆಲಸ ಮಾಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಸಲಹೆ ನೀಡಿದರು.
ಹಾಸನದಲ್ಲಿ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇಂದು ದೇಶ,ವಿಶ್ವದಲ್ಲಿ ಆತಂಕದ ಸನ್ನಿವೇಶ ಕಾಣುತ್ತಿದ್ದೇವೆ. ಮೂರನೇ ಮಹಾಯುದ್ಧದ ಭೀತಿ ಇದೆ. ಮೋದಿ ಅವರು 2 ನೇ ಬಾರಿಗೆ ಪ್ರಧಾನಿಯಾದ ನಂತರ ಆರ್ಥಿಕ ಪರಿಸ್ಥಿತಿ ಏರು ಪೇರಾಗಿದೆ. ಮೋದಿ ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆರ್ಥಿಕ ಪರಿಸ್ಥಿತಿ ಸರಿಪಡಿಸುವ ಬದಲು ಬೇಡವಾದುದನ್ನು ಜಾರಿಗೆ ತರುತ್ತಿದ್ದಾರೆ. ಭಾರತದ ಪ್ರಧಾನಿ ಮತ್ತು ಅಮೆರಿಕಾದ ಅಧ್ಯಕ್ಷರು ಒಂದೇ ದೋಣಿಯಲ್ಲಿ ಅಮೇರಿಕಾ ಅಧ್ಯಕ್ಷ ಮೋದಿ ಒಂದೇ ದೋಣಿಯಲ್ಲಿದ್ದಾರೆ. ಒಂದೇ ದೋಣಿಯಲ್ಲಿ ತೇಲುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರದ ಕೆಲ ನಡವಳಿಕೆಯಿಂದ ವಿದೇಶದಿಂದ ಹೂಡಿಕೆದಾರರು ಹಿಂಜರಿಯುತ್ತಿದ್ದಾರೆ. ಸಿಎಎ ವಿರುದ್ಧ ದೇಶವ್ಯಾಪಿ ಹೋರಾಟ ಹೆಚ್ಚು ವ್ಯಾಪಿಸದಂತೆ ಕೇಂದ್ರ ಕ್ರಮ ವಹಿಸಬೇಕು. ಮಂಗಳೂರು ಗಲಭೆ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುವೆ. ನನಗೆ ಸಿಎಎ ಎನ್ ಆರ್ ಸಿ ಮುಖ್ಯವಲ್ಲ. ಸಿಎಎ ಬಗ್ಗೆ ಜಾಗೃತಿ ಮೋದಿ, ಅಮಿತ್ ಶಾ ಮೆಚ್ಚಿಸೋ ನಾಟಕ. ಸಿಎಎ ಅನುಷ್ಠಾನ 6 ತಿಂಗಳು ಮುಂದೂಡಿದರೆ ಏನೂ ಮುಳುಗಿ ಹೋಗೋದಿಲ್ಲ ಎಂದು ಸಲಹೆ ನೀಡಿದರು.
ಈ ಸರಕಾರ ಟೇಕಾಫ್ ಆಗಿದೆಯೇ…?
ನೆರೆ ಪರಿಹಾರದ ಬಗ್ಗೆ ಸರಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಹೆಚ್.ಡಿ ಕುಮಾರಸ್ವಾಮಿ, ಸಚಿವರು ಎಷ್ಟರಮಟ್ಟಿಗೆ ಸಂತ್ರಸ್ತ ಕುಟುಂಬ ಕಾಪಾಡಿದ್ದಾರೆ ಸಂಕಷ್ಟದಲ್ಲಿರುವ ಜನರನ್ನು ಕಡೆಗಣಿಸಲಾಗಿದೆ. ನನ್ನ ಸರಕಾರ ಅಸಹ್ಯ ಸರಕಾರ ಅಂದ್ರು, ಇದು ಯಾವ ಸರಕಾರ ಎಂದು ಪ್ರಶ್ನೆ ಈ ಸರಕಾರ ಟೇಕಾಫ್ ಆಗಿದೆಯೇ…? ನೆರೆ ಪರಿಹಾರ ಸರಿಯಾಗಿ ಬಿಡುಗಡೆಯಾಗಿಲ್ಲ ಕೇಂದ್ರ ಸರಕಾರ ನರೇಗಾ ಬಾಬ್ತನ್ನೇ ಬಿಡುಗಡೆ ಮಾಡಿಲ್ಲ. ಬಜೆಟ್ ತಯಾರಿ ಬಗ್ಗೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನ ನಿಮ್ಮನ್ನು ನೆನೆಯುವ ಕೆಲಸ ಮಾಡಿ –ಸಿಎಂ ಯಡಿಯೂರಪ್ಪಗೆ ಸಲಹೆ
ಇದೇ ವೇಳೆ ಸಿಎಂ ಬಿಎಸ್ ವೈಗೆ ಸಲಹೆ ನೀಡಿದ ಹೆಚ್.ಡಿಕೆ, ಜನ ನಿಮ್ಮನ್ನು ನೆನೆಯುವ ಕೆಲಸ ಮಾಡಿ ಎಂದು ಯಡಿಯೂರಪ್ಪ ಗೆ ಸಲಹೆ. ರಾಜ್ಯದ ಜನರಿಗೆ ನಮ್ಮ ಹೋರಾಟ ಬೇಕಿಲ್ಲ. ಸರ್ವಪಕ್ಷ ನಿಯೋಗ ಕೊಂಡೊಯ್ಯುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದರು.
ಹಾಸನ ಜಿಲ್ಲೆ ತೆಂಗು ಬೆಳಗಾರರಿಗೆ ನಾನು 180 ಕೋಟಿ ಪರಿಹಾರ ಕೊಟ್ಟೆ . ಹಾಸನ ಜಿಲ್ಲೆಗೆ 54 ಕೋಟಿ ಕೊಟ್ಟಿದ್ದೇನೆ. ನಾನು ಜಿಲ್ಲೆಗೆ ಹಿಂದೆ ಕೊಟ್ಟಿದ್ದ ಹಣ ಬಿಡುಗಡೆ ಮಾಡಿದರೆ ಸಾಕು. ಆದ್ರೆ ಎಷ್ಟೋ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಆರ್ಥಿಕ ನಿರ್ವಹಣೆಯಲ್ಲಿ ರ್ಯಾಕಿಂಗ್ ಬರಲು ನನ್ನ ಆಡಳಿತ ಕಾರಣ ಎಂದು ಹೆಚ್.ಡಿಕೆ ನುಡಿದರು.
ನಾನು ರಾಜಕೀಯ ನಿವೃತ್ತಿ ಹೊಂದುವ ವಯಸ್ಸಾಗಿಲ್ಲ….
ನಾನು ಪಕ್ಷ ಸಂಘಟನೆ ಆಮೇಲೆ ಮಾಡುತ್ತೇನೆ. ನಾನು ರಾಜಕೀಯ ನಿವೃತ್ತಿ ಹೊಂದುವ ವಯಸ್ಸಾಗಿಲ್ಲ. ನನಗೆ ವೈರಾಗ್ಯ ಬಂದಿಲ್ಲ ಎಂದು ತಿರುಗೇಟು ನೀಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ಸಂದರ್ಭಕ್ಕಾಗಿ ಕಾಯುತ್ತಿದ್ದೇನೆ. ಬಿಎಸ್ ಯಡಿಯೂರಪ್ಪ ಕಷ್ಟಪಟ್ಟು ಸಿಎಂ ಆಗಿದ್ದಾರೆ. ರಾಜಾಹುಲಿ ಪ್ರಧಾನಿ ಮುಂದೆ ಇಲಿಯಾಗಿದೆ ನಾನಾಗಿಯೇ ಸರಕಾರ ಬೀಳಿಸಲು ಹೋಗಲ್ಲ, ಸ್ವಲ್ಪ ದಿನ ಇರಲಿ. ನಾನು ಹೆದರಿ ಪಲಾಯನ ವಾದ ಮಾಡಲ್ಲ. ನನ್ನ ತಪ್ಪು ಸರಿ ಪಡಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇನೆ, ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ಸೇನೆ. ನಾನು ಛಿ ಥು ಎನಿಸಿಕೊಂಡು ರಾಜಕೀಯ ಮಾಡಲ್ಲ ಜನರ ಪ್ರೀತಿ ಇರುವವರೆಗೆ ರಾಜಕೀಯದಲ್ಲಿ ಮುಂದುವರಿಯುವೆ ಎಂದು ತಿಳಿಸಿದರು.
ಸಂಕ್ರಾಂತಿ ನಂತರ ನಮ್ಮ ಎಲ್ಲರನ್ನೂ ಕೂತು ಸಭೆ ಕರೆಯುವೆ. ಮಾಧ್ಯಮಗಳ ಮುಂದೆ ಡ್ಯಾಮೇಜ್ ಮಾಡದಿರಿ ಎಂದು ಕೆಲವರಿಗೆ ಮನವಿ ಮಾಡಿದ್ದೇನೆ. ಪಕ್ಷ ಕಟ್ಟುವ ಶ್ರಮ ನನಗೆ ಗೊತ್ತಿದೆ, ಜಿಟಿಡಿ ಅನುಕೂಲ ಪಡೆದಿಲ್ಲವೇ? ಎಂದು ಟಾಂಗ್ ನೀಡಿದರು.
ರಾಮನಗರದ ಹೆಸರು ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಸರಕಾರದ ಮುಂದೆ ಪ್ರಸ್ತಾಪ ಇಲ್ಲ ಅಂದ್ರೆ, ರಾಮನಗರವನ್ನು ನವ ಬೆಂಗಳೂರು ಮಾಡೋ ಸುದ್ದಿ ಹರಿಯಬಿಟ್ಟಿದ್ದು ಏಕೆ..? ಇದು ಸಣ್ಣತನದ ಸರಕಾರ ಎಂದು ಕಿಡಿ ಕಾರಿದರು.
Key words: Hassan-Former CM -HD Kumaraswamy-new bomb-10 to 15 bjp MLAs- ready leave