ವಿಮಾ ಕಂಪನಿಯಿಂದ ರೈತರ ಕೋಟ್ಯಾಂತರ ರೂ. ಲೂಟಿ : ಸೂಕ್ತ ಕ್ರಮಕ್ಕೆ  ಸಚಿವ ಗೋಪಾಲಯ್ಯಗೆ ಆಗ್ರಹಿಸಿದ ಶಾಸಕ ಶಿವಲಿಂಗೇಗೌಡ…

ಹಾಸನ,ನವೆಂಬರ್,26,2020(www.justkannada.in):  ವಿಮಾ ಕಂಪನಿಗಳು ರೈತರಿಂದ ವಿಮಾ‌‌ ಕಂತನ್ನು ಕಟ್ಟಿಸಿಕೊಂಡು ರೈತರಿಗೆ ಬೆಳೆ ನಷ್ಟವಾದರೆ ಸರಿಯಾಗಿ ವಿಮಾ ಯೋಜನೆ ಹಣ ನೀಡುತ್ತಿಲ್ಲ. ಹೀಗೆ ರೈತರಿಗೆ ಮೋಸ ಮಾಡುವ ವಿಮಾ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯಗೆ ಆಗ್ರಹಿಸಿದರು.  Hassan- KDP- meeting-minister gopalaiah-mla - shivalingegowda

ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಾಸನ ಜಿಲ್ಲಾ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ಶಿವಲಿಂಗೇಗೌಡ,  ವಿಮಾ ಕಂಪನಿಯಿಂದ ರೈತರ ಕೋಟ್ಯಾಂತರ ರೂ ಲೂಟಿ ಮಾಡಲಾಗುತ್ತಿದೆ.  ವಿಮಾ‌‌ ಕಂತನ್ನು ಕಟ್ಟಿಸಿಕೊಂಡು ರೈತರಿಗೆ ಬೆಳೆ ನಷ್ಟವಾದರೆ ವಿಮಾ ಯೋಜನೆ ಹಣವನ್ನ  ಕಂಪನಿ ಸರಿಯಾಗಿ ನೀಡುತ್ತಿಲ್ಲ. ಫಸಲ್ ಭೀಮಾ‌ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ಲೋಪವಿದೆ. ಹೀಗಾಗಿ  ರೈತರಿಗೆ ಮೋಸ ಮಾಡುವ ವಿಮಾ ‌‌ಕಂಪನಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಶಾಸಕ ಶಿವಲಿಂಗೇಗೌಡ ಆಗ್ರಹಿಸಿದರು.

ಹಾಗೆಯೇ ಅರಸೀಕೆರೆ ತಾಲ್ಲೂಕಿನ ಕೊಣನೂರು ರೈತ ಸಂಪರ್ಕ ಕೇಂದ್ರಕ್ಕೆ ಸಹಾಯಕ ಕೃಷಿ ಅಧಿಕಾರಿ ನೇಮಕ ಸರಿಯಲ್ಲ. ಕಾನೂನಿನಂತೆ ಕೃಷಿ ಅಧಿಕಾರಿ ನೇಮಿಸುವಂತೆ ಶಿವಲಿಂಗೇಗೌಡ ಒತ್ತಾಯಿಸಿದರು. ಕೃಷಿಭಾಗ್ಯ ಯೋಜನೆಯ ಪಾಲಿ ಹೌಸ್ ಅಳವಡಿಕೆಯಲ್ಲಿ ಅಕ್ರಮ ತನಿಖೆಗೆ ಸಭೆಯಲ್ಲಿ ಶಾಸಕ ಶಿವಲಿಂಗೆಗೌಡ ಒತ್ತಾಯಿಸಿದರು. ಈ ವೇಳೆ ಸಚಿವ ಗೋಪಾಲಯ್ಯ ತನಿಖೆಗೆ ಆದೇಶ ನೀಡಿದರು.

ದಯವಿಟ್ಟು ನನಗೂ ಮಾತನಾಡಲು ಅವಕಾಶ ಕೊಡಿ… ನಾನು ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ

ಇನ್ನು ಸಭೆಯಲ್ಲಿ ಸಚಿವ ಗೋಪಾಲಯ್ಯ ಮಾತನಾಡಿ, ಅಕ್ಷರ ದಾಸೋಹ ಇಒ ಲತಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.  ಈ ಹಿಂದೆ ಅಕ್ಷರ ದಾಸೋಹದಡಿ ಬಂದ ತೊಗರಿ ಬೇಳೆ ಕಳಪೆ ಎಂದು ಮಾಹಿತಿ ನೀಡಿದ್ದೀರಿ ನೀವು ಸುಳ್ಳು ಮಾಹಿತಿ ನೀಡಿದ್ದೀರಿ. ಅದನ್ನು ಸರಿಯಾಗಿ ಪರಿಶೀಲಿಸದೆ ಕಳಪೆ ಎಂದು ಹೇಳಿದ್ದೀರಿ ಎಂದು ಸಚಿವ ಗೋಪಾಲಯ್ಯ, ಮಾಜಿ ಸಚಿವ ರೇವಣ್ಣ ಆರೋಪ ಮಾಡಿದರು.

ಈ ಬಗ್ಗೆ ಸ್ಪಷ್ಟನೆ ನೀಡಿ ಅಕ್ಷರ ದಾಸೋಹ ಇಒ ಲತಾ, ನಾನು ರಿಜೆಕ್ಟ್ ಮಾಡಿಲ್ಲ.. ಗೋಡೌನ್ ಮ್ಯಾನೇಜರ್ ರಿಜೆಕ್ಟ್ ಮಾಡಿದ್ದಾರೆ. ದಯವಿಟ್ಟು ನನಗೂ ಮಾತನಾಡಲು ಅವಕಾಶ ಕೊಡಿ… ನಾನು ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ ಎಂದು ತಿಳಿಸಿದರು.

ಸಕಾರಣವಿಲ್ಲದೆ ಹಿರಿಯ ಅಧಿಕಾರಿಗಳು ಗೈರಾಗಿ, ಕಿರಿಯ ಅಧಿಕಾರಿಗಳು ಹಾಜರಾಗಿದ್ರೆ ಆಚೆ ಹೋಗಿ

ಸಭೆಯಲ್ಲಿ ಹಿರಿಯ ಅಧಿಕಾರಿಗಳ ಗೈರಿಗೆ ಗರಂ ಆದ ಸಚಿವ ಗೋಪಾಲಯ್ಯ, ಸಕಾರಣವಿಲ್ಲದೆ ಹಿರಿಯ ಅಧಿಕಾರಿಗಳು ಗೈರಾಗಿ, ಕಿರಿಯ ಅಧಿಕಾರಿಗಳು ಹಾಜರಾಗಿದ್ರೆ ಆಚೆ ಹೋಗಿ. ಹಿರಿಯ ಅಧಿಕಾರಿಗಳು ಗೈರಾಗಿ, ಕಿರಿಯ ಅಧಿಕಾರಿಗಳು ಹಾಜರಾಗಿದ್ರೆ ಆಚೆ ಹೋಗಿ ಎಂದು ಸಚಿವ ಗೋಪಾಲಯ್ಯ ಸೂಚನೆ ನೀಡಿದ ಘಟನೆ ನಡೆಯಿತು.

ಕೋವಿಡ್ ರೋಗಿಗಳು ಇದ್ದ ಹಾಸ್ಟೆಲ್ ಗಳ ಬೆಡ್ ನ್ನು ಬೆಂಕಿಗೆ ಹಾಕಿ…

ಹಾಗೆಯೇ ಕೋವಿಡ್ ರೋಗಿಗಳು ಇದ್ದ ಹಾಸ್ಟೆಲ್ ಗಳ ಬೆಡ್ ನ್ನು ಬೆಂಕಿಗೆ ಹಾಕಿ ಮಂಚವನ್ನೂ ತೆಗೆದು ಹೊರಗಡೆ ಹಾಕಿ ಎಂದು ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಒತ್ತಾಯಿಸಿದರು.

ಸಿಎಂ ಕೋವಿಡ್ ರೋಗಿಗಳಿದ್ದ ಹಾಸಿಗೆಗೆ ಬೆಂಕಿ ಹಚ್ತೀವಿ ಅಂತಾ ಹೇಳಿದ್ರು, ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಎಂ ಇಲಾಖೆ ಹಾಸ್ಟೆಲ್ ಗಳ ಬೆಡ್ ತೆಗೆದು ಹಾಕಿ. ಈಗ ಆ ಕೆಲಸ ಮಾಡಿ, ಅಲ್ಲಿಗೆ ವಿದ್ಯಾರ್ಥಿಗಳು ಯಾರೂ ಹೋಗಿಲ್ಲ ಎಂದು ಶಾಸಕ ಶಿವಲಿಂಗೇಗೌಡ  ಆಗ್ರಹಿಸಿದರು.hassan-kdp-meeting-minister-gopalaiah-mla-shivalingegowda

ಅಲ್ಲದೆ ಈ ಬಗ್ಗೆ ನೀವು ಕ್ಯಾಬಿನೆಟ್ ನಲ್ಲಿ ಮಾತನಾಡಿ ಎಂದು ಸಚಿವ ಗೋಪಾಲಯ್ಯಗೆ  ಮನವಿ ಮಾಡದರು. ಇದಕ್ಕೆ ಉತ್ತರಿಸಿದ ಸಚಿವ ಗೋಪಾಲಯ್ಯ, ಕೆಲ ಆಸ್ಪತ್ರೆಗಳಲ್ಲೂ ಜನರು ಹೋಗುತ್ತಿಲ್ಲ.  ಕೋವಿಡ್ ಪೇಷೆಂಟ್ ಗಳು ಇದ್ದ ಬೆಡ್ ಗೆ ಯಾರೂ ಹೋಗುತ್ತಿಲ್ಲ. ಈ ಬಗ್ಗೆ ಮಾತಾಡ್ತೀನಿ.  ಈಗ ಸದ್ಯಕ್ಕೆ ಶಾಲೆಗಳನ್ನ ತೆರೆಯೊಲ್ಲಾ. ಆದ್ರೆ ಈಗ ಕೊರೋನಾ ಕಡಿಮೆಯಾಗಿದೆ ಮತ್ತೆ ಏನಾದರೂ ಹೆಚ್ಚಾದರೆ ನೋಡೋಣಾ ಅಂತಾ ಇದ್ದೀವಿ ಎಂದು ಹೇಳಿದರು.

Key words: Hassan- KDP- meeting-minister gopalaiah-mla – shivalingegowda