ಬೆಂಗಳೂರು,ನವೆಂಬರ್,10,2020(www.justkannada.in): ಹವಾಲ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪಂಕಜ್ ಪಟೇಲ್ ಬಂಧಿತ ಆರೋಪಿ. ಆರೋಪಿ ಪಂಕಜ್ ಪಟೇಲ್ ಮನೆಯಲ್ಲಿ ಲಕ್ಷಾಂತರ ರೂ ಇಟ್ಟುಕೊಂಡಿದ್ದ. ಹವಾಲ ಮೂಲಕ ಹಣ ಬೇರೆಯವರಿಗೆ ವರ್ಗಾವಣೆ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಬ್ಬನ್ ಪೇಟೆಯ ಪಂಕಜ್ ಪಟೇಲ್ ನಿವಾಸದ ಮೇಲೆ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.
ಬಂಧಿತನ ಮನೆಯಲ್ಲಿದ್ಧ 28 ಲಕ್ಷರೂ ಹಣ ಮತ್ತು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: havala scam- arrest-accused-bangalore-ccb-police