ಬೆಂಗಳೂರು,ಅಕ್ಟೋಬರ್,10,2020(www.justkannada.in): ಹವಾಲಾ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನ ಬೆಂಗಳೂರಿನ ಸದ್ದುಗುಂಟೆಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ನಿಹಾಲ್ ಮತ್ತು ಅನ್ಸರ್ ಬಂಧಿತ ಆರೋಪಿಗಳು. ಬಂಧಿತ ಇಬ್ಬರಿಂದ ಸುಮಾರು 27 ಲಕ್ಷ ರೂ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಮೊಹಮ್ಮದ್ ನಿಹಾಲ್ ಮತ್ತಿ ಅನ್ಸರ್ ತಾವರೇಕೆರೆಯ ಎಸ್ ಬಿಐ ಶಾಖೆ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ವಿಚಾರಣೆ ನಡೆಸಿದ್ದು ಈ ವೇಳೆ ಬ್ಯಾಗ್ ಪರಿಶೀಲಿಸಿದಾಗ 27 ಲಕ್ಷ ಹಣ ಪತ್ತೆಯಾಗಿದೆ. ಯಾವುದೇ ದಾಖಲೆ ಇಲ್ಲದ ಹಿನ್ನೆಲೆ ಹಣವನ್ನ ಪೊಲೀಸರು ವಶಕ್ಕೆ ಪಡೆದು ಆರೋಪಿಗಳನ್ನ ಬಂಧಿಸಿದ್ದಾರೆ.
Key words: havala scam- Arrest -two -accused