ಬೆಂಗಳೂರು, ಡಿಸೆಂಬರ್, 8,2023(www.justkannada.in): ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ಅಸಮಾಧಾನಗೊಂಡಿರುವ ಸಿಎಂ ಇಬ್ರಾಹಿಂ, ಇದೀಗ ಮತ್ತೆ ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಇಬ್ರಾಹಿಂ, ಡಿಸೆಂಬರ್ 11ರ ಬಳಿಕ ನಾವು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ರಾಜ್ಯದಲ್ಲಿ ನಮಗೆ ಮೂರನೇ ಶಕ್ತಿಯಾಗಿ ಬೆಳೆಯಲು ಅವಕಾಶವಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಮತ್ತೊಮ್ಮೆ ಹೇಳುತ್ತೇನೆ. ನಮ್ಮ ಮಾತನ್ನು ಕೇಳದಿದ್ದರೆ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸ್ಟೇಟ್ ಮೆಂಟ್ ನೋಡಿ ಬೇಸರವಾಯಿತು ಕುಮಾರಸ್ವಾಮಿ ಅವರೇ ಮೊದಲು ನಿಮ್ಮ ಆರೋಗ್ಯ ನೋಡಿಕೊಳ್ಳಿ. ದೇವೇಗೌಡ ಅವರು ಒತ್ತಡಕ್ಕೆ ಒಳಗಾಗಿದ್ದಾರೆ, ಸ್ವಂತ ನಿರ್ಧಾರ ತೆಗೆದುಕೊಂಡಿಲ್ಲ. ಎಲ್ಲಾ ಶಾಸಕರು ಜಾತ್ಯತೀತ ಸಿದ್ಧಾಂತದಲ್ಲೇ ಗೆದ್ದು ಬಂದಿರುವುದು. ಈಗಾಗಲೇ ಜೆಡಿಎಸ್ ನ ಐವರು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಇದು ದೇವೇಗೌಡರ, ಕುಮಾರಸ್ವಾಮಿ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು. ಹೀಗಾಗಿ ಸಮಾಧಾನದಿಂದ ಅವರಿಗೆ ಸಂದೇಶ ಮುಟ್ಟಿಸುತ್ತಿದ್ದೇನೆ ಎಂದರು.
Key words: HD Deve Gowda -does not- listen – us-decision – CM Ibrahim