ಹೆಚ್.ಡಿ ಕೋಟೆ,ಸೆ,5,2019(www.justkannada.in): ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡುವ ಕುರಿತು ನಿನ್ನೆ ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿಕೆ ನೀಡಿದ್ದರು. ಹೀಗಾಗಿ ಸರ್ಕಾರದ ಈ ಮದ್ಯ ಸರಬರಾಜು ಚಿಂತನೆಯನ್ನ ಖಂಡಿಸಿ ಎಚ್.ಡಿ ಕೋಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಜಿಲ್ಲೆ ಎಚ್ ಡಿ ಕೋಟೆ ಮಿನಿ ವಿಧಾನಸೌಧದ ಮುಂಭಾಗ ಎಐಡಿವೈಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮನೆಗಳಿಗೆ ಹಾಲು ಸರಬರಾಜು ಮಾಡುವ ಮಾದರಿಯಲ್ಲೇ ಮದ್ಯವನ್ನೂ ಪೂರೈಸಲಾಗುವುದು. ಅಗತ್ಯ ಇದ್ದವರು ಕೊಂಡುಕೊಳ್ಳುತ್ತಾರೆ ಎಂದು ಸಚಿವರೊಬ್ಬರ ಹೇಳಿಕೆ ಖಂಡಿಸಿ ಧರಣಿ ನಡೆಸಿದರು.
ಸರ್ಕಾರದ ಕ್ರಮ ದುರುದ್ದೇಶದಿಂದ ಕೂಡಿದೆ. ಇಂತಹ ಕ್ರಮಗಳನ್ನು ಕೈಗೊಳ್ಳಬಾರದು. ಮದ್ಯ ಮಾರಾಟದಿಂದಾಗಿ ಸಾಮಾಜಿಕ ಸಮಸ್ಯೆ ಹೆಚ್ಚು ತಲೆದೋರಿತ್ತದೆ. ಅತ್ಯಾಚಾರ, ಕೊಲೆ, ಮಾನಸಿಕ ಕಿರುಕುಳ, ಅಪಘಾತಗಳು ಹೆಚ್ಚಾಗುತ್ತವೆ. ಇದರಿಂದ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಲಿದೆ. ಕೂಡಲೆ ಜನಪ್ರತಿನಿಧಿಗಳು ಇಂತಹ ಚಿಂತನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಯಾವುದೇ ಕಾರಣಕ್ಕೆ ಸಮಾಜಕ್ಕೆ ಮಾರಕವಾದ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ಒತ್ತಾಯಿಸಿ ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಯಿತು.
Key words: hd kote- Protests – students -condemning – government- thinking –supplying- liquor