ಹೆಚ್.ಡಿ ಕೋಟೆ,ಜು,28,2020(www.justkannada.in): ಎಚ್.ಡಿ.ಕೋಟೆ, ಸರಗೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದು ಬಿಜೆಪಿ ಮತ್ತು ಜೆಡಿಎಸ್ ಮುಖಭಂಗ ಅನುಭವಿಸಿವೆ.
ಹೆಚ್.ಡಿ ಕೋಟೆ ಸರಗೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ (ಸಾಮಾನ್ಯಮಹಿಳೆ) ಕಾಂಗ್ರೆಸ್ ನ ಭಾರತಿ ಉಪಾಧ್ಯಕ್ಷೆಯಾಗಿ (ಎಸ್ಸಿ ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ತಾಯಮ್ಮ ಆಯ್ಕೆಯಾದರು. ಈ ಮೂಲಕ ಎಚ್.ಡಿ.ಕೋಟೆ ತಾ. ಪಂ ಹಾಲಿ ಅಧ್ಯಕ್ಷೆಯಾಗಿದ್ದ ಬಿಜೆಪಿ ಪಕ್ಷದ ಮಂಜುಳ ಅವರಿಗೆ ಹೀನಾಯ ಸೋಲುಂಟಾಯಿತು.
ಎಚ್.ಡಿ.ಕೋಟೆಯಿಂದ ಸರಗೂರು ಪ್ರತ್ಯೇಕ ತಾಲ್ಲೂಕು ಘೋಷಣೆ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ತಾಲ್ಲೂಕು ಪಂಚಾಯತ್ ಚುನಾವಣೆ ನಡೆಯಿತು. ಸರಗೂರು ಭಾಗಕ್ಕೆ ಸೇರಿದ 8 ತಾಪಂ ಕ್ಷೇತ್ರಗಳ ಸದಸ್ಯರಲ್ಲಿ ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು.
ಬಿಜೆಪಿ 5 ಸದಸ್ಯರ ಬಲವಿದ್ದು ಕಾಂಗ್ರೆಸ್ 3 ಸದಸ್ಯರಿದ್ದರೂ ಬಿಜೆಪಿ ಬೆಂಬಲದಿಂದ ಕಾಂಗ್ರಸ್ ಪಕ್ಷ ಅಧಿಕಾರದ ಗದ್ದುಗೆ ಏರಿತು. ಎರಡು ಸ್ಥಾನಗಳೂ ಕಾಂಗ್ರೆಸ್ ಮಯವಾದ ಹಿನ್ನೆಲೆ ಕಾಂಗ್ರೆಸಿಗರಲ್ಲಿ ಸಂಭ್ರಮ ಮನೆ ಮಾಡಿತ್ತು. ಅಧಿಕಾರ ಪಡೆಯುವಲ್ಲಿ ಹಾಲಿ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಮಾಜಿ ಸಂಸದ ಧೃವನಾರಾಯಣ್ ಕಾರ್ಯತಂತ್ರ ಯಶಸ್ವಿಯಾಯಿತು.
Key words: HD kote-Sarguru Taluk- Panchayat – power- Congress.