ಹಾಸನ,ಏಪ್ರಿಲ್,11,2024 (www.justkannada.in): ಜೆಡಿಎಸ್ ಎಲ್ಲಿದೆ. ಆಗಲೇ ಅದಕ್ಕೆ ಮುಕ್ತಿ ಆಗಿದೆ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೌಂಟರ್ ಕೊಟ್ಟಿದ್ದಾರೆ.
ಜೋತಿಷ್ಯ ಹೇಳೋದ್ರಲ್ಲಿ ಡಿ.ಕೆ ಶಿವಕುಮಾರ್ ಎಕ್ಸ್ ಪರ್ಟ್ ಅಲ್ವಾ..? ಅವರ ಬ್ಯಾಕ್ ತೆಗೆದ್ರೆ ಜ್ಯೋತಿಷಿ ಪುಸ್ತಕಗಳೇ ಇವೆ . ಕಾಂಗ್ರೆಸ್ ತೆಗೆಯೋಕೆ ನಾವು ಬೇಕಾದ ರಿಸರ್ಚ್ ಮಾಡಿದ್ದೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥಪುರದಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ವೈಯಕ್ತಿಕ ಲಾಭಕ್ಕೆ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿಲ್ಲ. ಕಾಂಗ್ರೆಸ್ ನವರು ದೇವೇಗೌಡರನ್ನು ಅಧಿಕಾರಿದಿಂದ ಯಾಕೆ ಕೆಳಗಿಳಿಸಿದರು. ಹೆಚ್.ಡಿ ದೇವೇಗೌಡರು ಮಾಡಿದ ದ್ರೋಹ ಏನು..? ದೇವಗೌಡರನ್ನ ಕೂರಿಸಿ ಮೋದಿ ನಿಂತುಕೊಳ್ಳುತ್ತಾರೆ. ಇದು ದೇವೇಗೌಡರಿಗೆ ಕೊಡುವ ಗೌರವ ಎಂದು ಚಾಟಿ ಬೀಸಿದರು.
ನಾನು ಸಿಎಂ ಆಗಿದ್ದಾಗ ಈ ಜಿಲ್ಲೆಗೆ ಮಗನಾಗಿ ಕೆಲಸ ಮಾಡಿದ್ದೇನೆ. ನಾನು 14 ತಿಂಗಳು ಸಿಎಂ ಆಗಿದ್ದಾಗ ಹಲವು ಸಮಸ್ಯೆ ಎದುರಿಸಿದ್ದೇನೆ. ನಾನು ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡುವುದಾಗಿ ಹೇಳಿದ್ದೆ ಯಾರಿಗೂ ಬಹುಮತ ಸಿಗದಿದ್ದಾಗ ಅವರೇ ಹೆಚ್ ಡಿ ದೇವೇಗೌಡರ ಭೇಟಿಯಾಗಿದ್ದರು. ಹೆಚ್. ಡಿ ದೇವೇಗೌಡರು ನನ್ನ ಮಗ ಸಿಎಂ ಆಗುವುದು ಬೇಡ ಎಂದಿದ್ದರು. ಆದರೆ ಒತ್ತಡ ಹಾಕಿ ಸಿಎಂ ಮಾಡಿದರು. ಸಾಲಮನ್ನಾಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ನಾನು ಎಲ್ಲಾ ಯೋಜನೆಗೂ ಹಣಕೊಟ್ಟು ಸಾಲಮನ್ನಾ ಮಾಡಿದ್ದೆ ಎಂದು ಹೆಚ್.ಡಿಕೆ ಹೇಳಿದರು.
Key words: HD Kumaraswamy, congress, DK Shivakumar