ಬೆಂಗಳೂರು,ಜು,24,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗಿ ಸಿಎಂ ಸ್ಥಾನಕ್ಕೆ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯುವ ಮುನ್ನ ರಾಜ್ಯದ ಜನತೆಗೆ ಬಿಗ್ ಗಿಫ್ಟ್ ನೀಡಿದ್ದಾರೆ.
ಹೌದು, ರಾಜ್ಯದ ಜನತೆಗೆ ಋಣಮುಕ್ತ ಕಾಯ್ದೆ ಜಾರಿ ಮಾಡಿದ್ದು, ಭೂಮಿ ಇಲ್ಲದ ರೈತರಿಗೆ ಹಾಗೂ 2 ಹೆಕ್ಟೆರ್ ಭೂಮಿ ಹೊಂದಿರದ ರೈತರು, ಸಣ್ಣ ರೈತರು, ಮನೆ ಇಲ್ಲದವರಿಗೆ ಈ ಕಾಯ್ದೆಯಿಂದ ಅನುಕೂಲವಾಗಲಿದೆ. ಕೃಷಿ, ವಾರ್ಷಿಕ ಆದಾಯ ಸೇರಿದಂತೆ ಹಲವು ಋಣಮುಕ್ತ ಮಾಡಲು ಋಣ ವಿಮೋಚನಾ ಮುಕ್ತ ಕಾಯ್ದೆ.ಸ್ಥಿರಾಸ್ತಿ ಅಡಮಾನ ಮಾಡಿದರೆ, ಅದನ್ನ ಬಿಡುಗಡೆಗೆ ಅವಕಾಶ ಇರಲಿದೆ. ವಾರ್ಷಿಕ 1,20,000ರೂ. ಆದಾಯದ ಒಳಗಾಗಿದ್ದರೆ, ಅನುಕೂಲ ಸಿಗಲಿದೆ. ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲವೂ ಮನ್ನಾ ಆಗಲಿದೆ. ಯಾವುದೇ ಕೈಸಾಲ ಪಡೆದಿದ್ದರೂ ಅದು ಮನ್ನಾ ಆಗಲಿದೆ.
ಇಂದು ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಉಸ್ತುವಾರಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಿನ್ನೆ ಕೊನೆ ದಿನ ಒಂದು ಅಧಿಸೂಚನೆ ಹೊರಡಿಸಿದ್ದೇವೆ. ಋಣಮುಕ್ತ ಕಾಯ್ದೆ ಜಾರಿ ಮಾಡಿದ್ದೇವೆ. ಭೂಮಿ ಇಲ್ಲದ ರೈತರಿಗೆ 2 ಹೆಕ್ಟೆರ್ ಭೂಮಿ ಹೊಂದಿರದ ರೈತರಿಗೆ ಈ ಕಾಯ್ದೆಯಿಂದ ಅನುಕೂಲವಾಗಲಿದೆ. 1ಲಕ್ಷ 20 ಸಾವಿರಕ್ಕಿಂತ ಕಡಿಮೆ ವರಮಾನ ಇರುವವರಿಗೆ ಇದು ಅನ್ವಯವಾಗಲಿದೆ. ಹೀಗಾಗಿ 90 ದಿನದ ಒಳಗೆ ಖಾಸಗಿ ಸಾಲದ ಮಾಹಿತಿಯನ್ನ ನೋಡೆಲ್ ಅಧಿಕಾರಿಗಳಿಗೆ ತಲುಪಿಸಬೇಕು. ಆಕ್ಟ್ ಜಾರಿಯಾಗುವುದಕ್ಕಿಂತ ಸಾಲಪಡೆದವರಿಗೆ ಮಾತ್ರ ಇದರ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಳೆದ 14 ತಿಂಗಳ ಅವಧಿಯಲ್ಲಿ ಕೆಲಸ ಮಾಡಿದ್ದೇವೆ. ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೇವೆ. ಹಲವು ಯೋಜನೆಗಳನ್ನ ಅನುಸ್ಟಾನಕ್ಕೆ ತಂದಿದ್ದೇವೆ. ಸರ್ಕಾರವನ್ನ ಅಸ್ಥಿರಗೊಳಿಸುವ ಪ್ರಯತ್ನ ನಡೆಯಿತಿತ್ತು. ಆದರೆ ನಾವು ರಾಜ್ಯದ ಆರ್ಥಿಕ ಶಿಸ್ತು ಕಾಪಾಡಿದ್ದೇವೆ. ಅಧಿಕಾರಿಗಳು ವಿನೂತನ ಜನಪರ ಕಾರ್ಯಗಳನ್ನ ಮಾಡಿದ್ದಾರೆ. ಕೈಗಾರಿಗೆ ಅಧಿಕಾರಿಗಳಿಂದ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ನನಗೆ ಸಹಕಾರ ನೀಡಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಡೆಡ್ ರಿಲೀಫ್ ಆಕ್ಟ್ ತರಲು ನಮ್ಮ ಅಧಿಕಾರಿಗಳು ರಾಜ್ಯಪಾಲರ ಅಲೆದು ಮಾಡಿಸಿದ್ದಾರೆ. ಜನಪ್ರತಿ ನಿಧಿಗಳ ಜವಾಬ್ದಾರಿಗಿಂತ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ. ಸರ್ಕಾರದಲ್ಲಿ ಯಾವುದೇ ಅಸ್ಥಿರತೆ ಇದ್ರು ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು, ಪ್ರಾಮಾಣಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಮುಂದಿನ ರಾಜಕಾರಣದಲ್ಲೂ ಅರಾಜಕತೆ ಉಂಟಾಗಬಹುದು. ಇಂದಿನ ಪರಿಸ್ಥಿತಿ ಗಮನಿಸಿದರೇ ಅರಾಜಕತೆ ಉಂಟಾಗುವ ಸಾಧ್ಯತೆ ಇದೆ. ರಾಜ್ಯ ರಾಜಕೀಯಲದಲ್ಲಿ ಅಸ್ಥಿರತೆ ಮುಂದುವರೆಯಲಿದೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಭವಿಷ್ಯ ನುಡಿದರು.
Key words: HD Kumaraswamy –gift-people- Debt Relief Act.