ಬೆಂಗಳೂರು,ಮೇ,13,2024 (www.justkannada.in): ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು ಕೋರ್ಟ್ ಗೆ ಎಸ್ ಪಿಪಿ ಅವರು ತನಿಖಾ ವರದಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಹೆಚ್.ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು ಈ ನಡುವೆ ಮುಚ್ಚಿದ ಲಕೋಟೆಯಲ್ಲಿ ಎಸ್ ಪಿಪಿ ತನಿಖಾ ವರದಿ ಸಲ್ಲಿಸಿದರು.
ಹಾಗೆಯೇ ಇಂಥಾ ಪ್ರಕರಣದಲ್ಲಿ ಜಾಮೀನು ನೀಡಲು ಅವಕಾಶವಿಲ್ಲ. ಕಿಡ್ನಾಪ್ ಪ್ರಕರಣ ಗಂಭೀರವಾಗಿದೆ ಎಂದು ಎಸ್ ಪಿಪಿ ಜಯ್ನಾ ಕೊಠಾರಿ ವಾದ ಮಂಡಿಸಿದರು. ಇನ್ನು ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಿದ್ದಕ್ಕೆ ಹೆಚ್ ಡಿ ರೇವಣ್ಣ ಪರ ವಕೀಲರು ಆಕ್ಷೇಪಿಸಿದರು. ಈ ವೇಳೆ ರೇವಣ್ಣ ಪರ ವಕೀಲರಿಗೂ ಎಸ್ ಪಿಸಿ ತನಿಖಾ ವರದಿ ಪ್ರತಿ ನೀಡಿದರು.
Key words: HD Revanna, bail application, court