ಚನ್ನಪಟ್ಟಣ,ಅಕ್ಟೋಬರ್, 24,2024 (www.justkannada.in ) ಹೆಚ್ ಡಿ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದಾಗ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ದಿಗೆ ತಾವು ನೀಡಿದ ಕೊಡುಗೆ ಪಗ್ಗೆ ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸವಾಲು ಹಾಕಿದರು.
ಇಂದು ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆಶ ಶಿವಕುಮಾರ್, ಕಷ್ಟ ಕಾಲದಲ್ಲಿ ನಿಂತವರ ಪರನಿಲ್ಲಬೇಕು . ಶುಭ ಘಳಿಗೆಯಲ್ಲಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇವರ ಕೈ ಬಲಪಡಿಸುವುದರ ಮೂಲಕ ದೇಶಕ್ಕೆ ಬಲವಾದ ಸಂದೇಶ ನೀಡಬೇಕು. ಅತಿ ಹೆಚ್ಚು ಮತಗಳ ಅಂತರದಿಂದ ಇವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಹೇಳಿದ್ದು ಯಾರು? ಈ ಬಗ್ಗೆ ತನಿಖೆ ಆಗಲಿ ಚನ್ನಟ್ಟಣದಲ್ಲಿ ಅಜೆಂಡಾ ಶುರುಮಾಡಿದ್ದೇ ಅವರು. ನಮ್ಮ ಕಷ್ಟ ಕಾಲದಲ್ಲಿ ನಿಂತವರ ಪರ ನಿಲ್ಲಬೇಕು ಚನ್ನ ಪಟ್ಟಣಕ್ಕೆ 500 ಕೋಟಿ ಯೋಜನೆ ನೀಡಿದ್ದೇವೆ. ಅಭಿವೃದ್ದಿಗೆ ಹೊಸ ರೂಪ ಕೊಡುತ್ತೇವೆ ಅಧಿಕಮತಗಳ ಅಂತರದಿಂದ ಗೆಲ್ಲಿಸಿ. ಶುಭ ಘಳಿಗೆ ಶೂಮುಹೂರ್ತಲ್ಲಿ ಕಾಂಗ್ರೆಸ್ ಸೇರ್ಪಡೆ ಯಾಗಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಮುಂದೆ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿದರು.
Key words:, HDK, contribution list , Channapatna development-,DCM, DK Shivakumar’s