ಹೆಚ್.ಡಿಕೆ ಹೇಳಿಕೆಗೆ ತಿರುಗೇಟು: ಹಳ್ಳಿಹಕ್ಕಿ ವಿರುದ್ದ ಸಚಿವ ಭೈರತಿ ಸುರೇಶ್ ಕೆಂಡಾಮಂಡಲ

ಚಾಮರಾಜನಗರ,ಜುಲೈ,5,2024 (www.justkannada.in):  ಸಿಎಂ ಕುರ್ಚಿಗಾಗಿ ಮುಡಾ ಹಗರಣ ಹೊರಬಂದಿದೆ ಎಂದು ಆರೋಪಿಸಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಭೈರತಿ ಸುರೇಶ್,  ಹಗರಣವೇ ಆಗಿಲ್ಲ, ಇನ್ನು ಹೇಗೆ ಆಚೆಗೆ ಬರಲಿದೆ. ಮುಡಾ ಪ್ರಕರಣಕ್ಕೂ  ಡಿಸಿಎಂ ಡಿಕೆ ಶಿವಕುಮಾರ್ ಗೂ ಸಂಬಂಧವಿಲ್ಲ, ಈಗ ತನಿಖೆ ಹಂತದಲ್ಲಿದೆ ಎಂದರು.

ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಭೈರತಿ ಸುರೇಶ್, ಹಗರಣ ಎಂದೇ ಸಾಬೀತಾಗಿಲ್ಲ, ಸಿಬಿಐಗೆ ಏಕೆ ಕೊಡಬೇಕು. ನಮ್ಮ ರಾಜ್ಯದಲ್ಲಿ ಪೊಲೀಸರು ಇಲ್ವಾ, ಹಗರಣವೇ ಆಗಿಲ್ಲ ಎಂದು ದೃಢಪಡದೇ ಸಿಬಿಐಗೆ ಏಕೆ ಕೊಡಬೇಕು. ಬಿಜೆಪಿಯವರು ಸಿಬಿಐಗೆ ಕೊಟ್ಟು ಏನು ಮಹಾ ಮಾಡಿದ್ದಾರೆ. ಅವರು ಎಷ್ಟು ಕೇಸ್ ಸಿಬಿಐಗೆ ಕೊಟ್ಟಿದ್ದಾರೆ, ಇಬ್ಬರು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಅಂತಿಮ ವರದಿಗೆ ನಾಲ್ಕು ವಾರಗಳ ಸಮಯವಿದೆ, ಬಿಜೆಪಿ- ಜೆಡಿಎಸ್ ಅವರು ಹೇಳಿದಂಗೆ ಕೇಳಲಾಗಲ್ಲ. ಕಾಂಗ್ರೆಸ್ ‌ನಲ್ಲಿ ಯಾವುದೇ ಬಣ ರಾಜಕೀಯ ಇಲ್ಲ, ಇರುವುದು ಒಂದೇ ಬಣ ಅದು ಕಾಂಗ್ರೆಸ್ ಬಣ ಎಂದು ಹೇಳಿದರು.

ತಮ್ಮ ವಿರುದ್ದ ಏಕವಚನ ಪ್ರಯೋಗಿಸಿ ವಾಗ್ದಾಳಿ ನಡೆಸಿದ್ದ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಗೆ  ವಿರುದ್ದ ಕೆಂಡಾಮಂಡಲರಾದ ಸಚಿವ ಬೈರತಿ ಸುರೇಶ್, ಏ ಯಾರ್ರಿ ಅವನು ವಿಶ್ವನಾಥ್ ಹಾ ರಿಯಲ್ ಎಸ್ಟೇಟ್ ಒಂದು ಉದ್ಯಮ ಅಲ್ವಾ..? ಅವ್ನು ಅವನ ಮಗ ನನ್ನ ಮನೆಗೆ ಸೈಟ್ ಕೇಳೋಕೆ ಬಂದಿದ್ದು ಫೋಟೊ ಇದೆ. ಅವನು ಏಕವಚನ ಬಳಸಿದ್ರೆ ನಾನು ಅದಕ್ಕಿಂತ ಹೆಚ್ಚಿಗೆ ಮಾತನಾಡೋಕೆ ಬರುತ್ತೆ. ನಾನು ಹಳ್ಳಿಯಲ್ಲೇ ಹುಟ್ಟಿ ಬೆಳೆದಿರೋದು.  ನಾನು ಅವರ ಅಪ್ಪನಂಗೆ ಮಾತಾಡುತ್ತೇನೆ. ಮೊದಲು ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದು ಕೊಳ್ಳಲಿ. ವಿಶ್ವನಾಥ್ ತರ ನಾನು ರೋಲ್ ಕಾಲ್ ಗಿರಾಕಿ ಅಲ್ಲ. ವಯಸ್ಸಾಗಿದೆ ಅಂತ ಅಷ್ಟೇ ಬೆಲೆ ಕೊಡ್ತೀವಿ ಅದನ್ನ ಉಳಿಸಿ ಕೊಳ್ಳಲಿ. ಎಂದು ಹಳ್ಳಿ ಕಿಡಿಕಾರಿದರು.

Key words: HDK, H.Vishwanath, statement, Bhairati Suresh