ನನ್ನ ರಾಜಕೀಯದ ಬಗ್ಗೆ ಹೆಚ್.ಡಿಕೆಗೆ ಏನ್ ಗೊತ್ತು? ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್

ಮಂಗಳೂರು,ಜೂನ್,25,2024 (www.justkannada.in):  ಚನ್ನಪಟ್ಟಣ ಉಪಚುನಾವಣೆ ತಾವು ಸ್ಪರ್ಧಿಸುವ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ.

ಇಂದು  ಮಾಧ್ಯಮಗಳ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಎಚ್ ಡಿ ಕುಮಾರಸ್ವಾಮಿಗಿಂತ ಮುಂಚೆ ಚನ್ನಪಟ್ಟಣ ನಾನು ನೋಡಿದ್ದೆ.  ಹೆಚ್ ಡಿ ಕುಮಾರಸ್ವಾಮಿ ತಡವಾಗಿ ರಾಜಕಾರಣಕ್ಕೆ ಬಂದವರು ನನ್ನ ರಾಜಕೀಯದ ಬಗ್ಗೆ ಹೆಚ್ ಡಿಕೆಗೆ ಏನ್ ಗೊತ್ತು? ಎಂದು ಟಾಂಗ್ ನೀಡಿದರು.

ನನ್ನ ತಮ್ಮನಿಗೆ ಚುನಾವಣೆಯಲ್ಲಿ ಆಸಕ್ತಿ ಇಲ್ಲ ಪಕ್ಷಕ್ಕಾಗಿ ಕೆಲಸ ಮಾಡಬೇಕೆಂಬ ಆಸೆ ಇದೆ.  ನಮ್ಮನ್ನ ನಂಬಿ 85 ಸಾವಿರ ಜನ ವೋಟ್ ಹಾಕಿದ್ದಾರೆ. ನಾವು ನಂಬಿಕೆ  ಉಳಿಸಿಕೊಳ್ಳಬೇಕಿದೆ. ನಾವು ಅಳಿಲು ಸೇವೆ ಮಾಡೋಣ ಅಂದುಕೊಂಡಿದ್ದೇವೆ ಎಂದರು.

Key words: HDK –politics- DCM -DK Shivakumar