ರಾಮನಗರ,ನವೆಂಬರ್,7,2024 (www.justkannada.in): ಭಾರಿ ಕುತೂಹಲ ಮೂಡಿಸಿರುವ ಚನ್ನಪಟ್ಟಣ ಉಪ ಚುನಾವಣೆ ಕಣ ರಂಗೇರಿದ್ದು, ಎನ್ ಡಿಎ ಮತ್ತು ಕಾಂಗ್ರೆಸ್ ನಡುವೆ ಆಡಿಯೋ ರಾಜಕಾರಣ ಮುಂದುವರೆದಿದೆ. ತಮ್ಮ ವಿರುದ್ದ ನಿನ್ನೆ ಮಾಜಿ ಸಂಸದ ಡಿಕೆ ಸುರೇಶ್ ಆಡಿಯೋ ಬಿಡುಗಡೆ ಮಾಡಿದ್ದಕ್ಕೆ ಇದೀಗ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಸಿಪಿ ಯೋಗೇಶ್ವರ್ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್ ಮಾತನಾಡಿದ್ದ ಆಡಿಯೋವನ್ನ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರಿಲೀಸ್ ಮಾಡಿದ್ದಾರೆ. ಕಾರ್ಯಕರ್ತನ ಜೊತೆಗೆ ಹೆಚ್ ಡಿ ಡಿ ಕೆ ಸುರೇಶ್ ಅವರು ಮಾತನಾಡಿರುವ ಆಡಿಯೋ ರಿಲೀಸ್ ಆಗಿದೆ. ವಿರುಪಾಕ್ಷಿಪುರದಲ್ಲಿ ಎಚ್ ಡಿ ಕುಮಾರಸ್ವಾಮಿ ಆಡಿಯೋ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದಾರೆ.
ಸಿಪಿ ಯೋಗೇಶ್ವರ್ ಮೆಗಾಸಿಟಿ ಕಳ್ಳ ಎಂದು ಡಿಕೆ ಸುರೇಶ್ ಅವರು ಮಾತನಾಡಿರುವ ಆಡಿಯೋ ಇದಾಗಿದೆ. ನಿನ್ನೆ ಮಾಜಿ ಸಂಸದ ಡಿಕೆ ಸುರೇಶ್ ಅವರು ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡಿದ್ದರು.
Key words: HDK, release, audio, DK Suresh, Yogeshwar