ಮೈಸೂರು,ಮೇ,27,2019(www.justkannada.in): ಲೋಕಸಭೆ ಚುನಾವಣಾ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಜನಾದೇಶ ನೀಡಿರೋದು ಕೇಂದ್ರದಲ್ಲಿ. 2018 ರಲ್ಲೇ ರಾಜ್ಯದ ಆಡಳಿತಕ್ಕೆ ಸಂಬಂಧಿಸಿದಂತೆ ಜನಾದೇಶ ನೀಡಿದ್ದಾರೆ. ಹೀಗಾಗಿ ಲೋಕಸಭಾ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಾವು ಹಲವು ಉಪಚುನಾವಣೆ ಗಳಲ್ಲಿ ಗೆದ್ದಿದ್ದೆವು. ಆಗ ಮೋದಿ ರಾಜೀನಾಮೆ ನೀಡಿದ್ರಾ? ಈ ಚುನಾವಣೆಯಲ್ಲಿ ಜನರು ನೀಡಿರೋ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಇವಿಎಂ ಮೇಲೆ ಈಗಲೂ ಅನುಮಾನ ಇದೆ. ಆದರೂ ಜನರ ಆದೇಶವನ್ನು ನಾವು ಗೌರವಿಸುತ್ತೇವೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯಾವ ಕಾರಣಕ್ಕೆ ಕಾಂಗ್ರೆಸ್ ಸೋತಿದೆ ಎಂಬುದು ಗೊತ್ತಿಲ್ಲ. ಇಂದು ಲೋಕಸಭಾ ಫಲಿತಾಂಶದ ಬಗ್ಗೆ ತಳಮಟ್ಟದ ಕಾರ್ಯಕರ್ತರ ಜೊತೆ ಪರಾಮರ್ಶೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಶಾಸಕ ಸುಧಾಕರ್ ಹಾಗೂ ರಮೇಶ್ ಜಾರಕಿಹೋಳಿ, ಎಸ್ ಎಂ ಕೃಷ್ಣ ಮನೆಗೆ ಒಟ್ಟಿಗೆ ಭೇಟಿ ನೀಡಿದ್ದು ಕಾಕತಾಳೀಯ. ಶಾಸಕ ಸುಧಾಕರ್ ಭೇಟಿಗೆ ರಮೇಶ್ ಜಾರಕಿಹೊಳಿ ಬಂದಿದ್ದರು. ಆ ವೇಳೆ ಸುಧಾಕರ್ ಎಸ್.ಎಂ ಕೃಷ್ಣ ಮನೆಗೆ ಹೊರಟಿದ್ರು, ಇಬ್ಬರು ಸೇರಿ ಎಸ್ ಎಂ ಕೃಷ್ಣ ಅವರನ್ನ ಭೇಟಿ ಮಾಡಿದ್ದಾರೆ. ಆರ್ ಅಶೋಕ್ ಆಗಲಿ ಅಥವಾ ಸುಮಲತಾ ಆಗಲಿ ಅಲ್ಲಿಗೆ ಬರೋದು ಇಬ್ಬರಿಗೂ ಗೊತ್ತಿರಲಿಲ್ಲ, ಎಲ್ಲರ ಭೇಟಿ ಆಕಸ್ಮಿಕ ರಮೇಶ್ ಜಾರಕಿಹೊಳಿ ಸೇರಿದಂತೆ ಯಾರೊಬ್ಬರೂ ಕಾಂಗ್ರೆಸ್ ಬಿಟ್ಟು ಹೋಗಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
Key words: The results of Lok Sabha elections have no effect on the state government-Former CM Siddaramaiah
#mysore #siddaramaiah #Lok Sabhaelections #effect