ಮೈಸೂರು,ಜುಲೈ,3,2021(www.justkannada.in): ಕೊರೋನಾ ಸಂಕಷ್ಟದಲ್ಲಿ ಗ್ರಾಮೀಣ ಜನರಿಗೆ ನೆರವಾಗಲು ಹಾಗೂ ಭಯದ ವಾತಾವರಣ ತಪ್ಪಿಸಲು ಆರಂಭವಾದ ಗ್ರಾಮೀಣ ಜನರ ಕೊರೋನಾ ಸೇವಾ ಪಡೆ ಅರವತ್ತು ದಿನಗಳನ್ನು ಪೂರೈಸಿದ್ದು ಅದರ ನೆನಪಿಗಾಗಿ ವೈದ್ಯಕೀಯ ಆರೋಗ್ಯ ತಪಾಸಣಾ. ಲಸಿಕೆ ಹಾಕುವ ಕಾರ್ಯಕ್ರಮವನ್ನು ಅಂಬಳೆ ಗ್ರಾಮದಲ್ಲಿ ಇಂದು ನಡೆಸಲಾಯಿತು.
150 ಜನರಿಗೆ ಲಸಿಕೆ. 150 ಜನರಿಗೆ ಪರೀಕ್ಷೆ, ಇನ್ನೂರಕ್ಕೂ ಹೆಚ್ಚು ಜನರಿಗೆ ಬೇರೆಬೇರೆ ಕಾಯಿಲೆಯ ಆರೋಗ್ಯ ಪರೀಕ್ಷೆ ನಡೆಸಲಾಯಿತು
ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಸೇವಾ ಪಡೆಯ ಮುಖ್ಯಸ್ಥ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ್, ವೈದ್ಯರು ಜನರ ಸಂಕಷ್ಟ ಕಾಲದಲ್ಲಿ ತಮ್ಮ ಪ್ರಾಣ ಬದಿಗಿಟ್ಟು ಸೇವೆಸಲ್ಲಿಸಿದ್ದಾರೆ. ಜನರಲ್ಲಿ ಇದ್ದ ಆತಂಕ ಭಯ ಹೋಗಲಾಡಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಟೆಲಿಮೆಡಿಸಿನ್ ಸೇವೆ ಮೂಲಕ ನಮ್ಮ ಗುಂಪಿನಿಂದ 2500 ಜನರಿಗೆ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದ್ದಾರೆ. ಸಹಸ್ರಾರು ಜನರಿಗೆ ಗೂಗಲ್ ಮೀಟ್ ಮೂಲಕ ರೋಗ. ಲಸಿಕೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ದೂರವಾಣಿ ಮೂಲಕವೇ ಅರಿವು ಮೂಡಿಸಿದ್ದಾರೆ.
ಗ್ರಾಮೀಣ ಜನರ ಬಗ್ಗೆ ಅಪಾರ ಪ್ರೀತಿ ಗೌರವ ಇರುವ ದಾನಿಗಳು ನಮ್ಮ ಸಂಸ್ಥೆಯ ಮೂಲಕ ಅಕ್ಷಯ ಪಾತ್ರ ಫೌಂಡೇಶನ್ 1600 ಆಶಾ ಕಾರ್ಯಕರ್ತರಿಗೆ ಆಹಾರ ಕಿಟ್ ಹಾಗೂ ರೂರಲ್ ರಿಲೀಪ ಪ್ರಾಜೆಕ್ಟ್ ಔಷದ ಉಪಕರಣಗಳನ್ನು ನೀಡಿದ್ದಾರೆ ಅದಕ್ಕಾಗಿ ಅವರಿಗೆ ವಿಶೇಷ ಧನ್ಯವಾದಗಳು. ಸಮಾಜ ಸೇವಕರ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಎಲ್ಲರೂ ಜನಪ್ರತಿನಿಧಿಗಳು ಪ್ರಮಾಣಿಕವಾಗಿ ಇದೇ ರೀತಿ ಕಾರ್ಯಕ್ಕೆ ಮುಂದಾದರೆ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂಬುದು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಕೆಲವರು ಜನರ ಮುಂದೆ ನಾಟಕೀಯವಾಗಿ ವರ್ತಿಸಿ ನಾಪತ್ತೆಯಾಗುತ್ತಾರೆ .ಅದಕ್ಕಾಗಿ ಸಮಾಜದ ಯಾವ ಮುಖಂಡರ ಬಗ್ಗೆಯೂ ಜನರಿಗೆ ವಿಶ್ವಾಸ ನಂಬಿಕೆ ಉಳಿದಿಲ್ಲ ಎಂದರು.
ಆರಂಭದಲ್ಲಿ ಉದ್ಘಾಟನೆ ಮಾಡಿದ ಅಕ್ಷಯಪಾತ್ರ ಫೌಂಡೇಶನ್ ಮುಖ್ಯಸ್ಥರಾದ ಕೇಶವ ಕೃಷ್ಣದಾಸ್, ಜನರ ಸಂಕಷ್ಟದಲ್ಲಿ ನಾವು ನೆರವಾಗಬೇಕೆಂದು ಆಶಾ ಕಾರ್ಯಕರ್ತರಿಗೆ ಹಾಗೂ ದಿನನಿತ್ಯ 2000 ಜನರಿಗೆ ಊಟದ ವ್ಯವಸ್ಥೆ ನೀಡಿದ್ದೇವೆ. ಎಲ್ಲವೂ ಆ ದೇವರ ಅನುಗ್ರಹದಿಂದ ಆಗಿದೆ. ನಮ್ಮ ಸಂಸ್ಥೆಯಿಂದ ರಾಜ್ಯದಲ್ಲಿ 18 ಲಕ್ಷ ಶಾಲಾ ಮಕ್ಕಳಿಗೆ ಬಿಸಿ ಊಟ ನೀಡಲಾಗುತ್ತಿದೆ ಎಂದರು.
ಗ್ರಾಮೀಣ ಪಡೆಯ ವೈದ್ಯರಾದ ಡಾಕ್ಟರ್ ಪ್ರತಿಮಾ ಪೆರಾರಿ ಮಾತನಾಡಿ. ರೈತರು ದೇಶದ ಬೆನ್ನೆಲುಬು ಅವರು ಆರೋಗ್ಯವಾಗಿದ್ದರೆ ವೈದ್ಯರು ಆರೋಗ್ಯವಾಗಿದಂತೆ. ರೈತರ ಜೀವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಮನುಷ್ಯನ ಮನಸ್ಸಿನ ಶಾಂತಿಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಉತ್ತಮ ಆಹಾರ ಮನಸ್ಸಿನ ಶಾಂತಿ ನೆಮ್ಮದಿ ಜೀವನ ಎಲ್ಲವೂ ರೋಗನಿರೋಧಕ ಶಕ್ತಿ ಹೆಚ್ಚಲು ಕಾರಣವಾಗುತ್ತದೆ ಎಂದರು.
ವಿಭಾಗಿಯ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಮಾತನಾಡಿ, ಲಸಿಕೆ ಹಾಕಿಸಿಕೊಳ್ಳುವುದರಿಂದ ಕೋರೋನಾ ಕಾಯಿಲೆಗೆ ತಡೆಯೊಡ್ಡಲು ಮಾಸ್ ಧರಿಸಿ ಅಂತರ ಕಾಪಾಡಿಕೊಂಡರೆ ರೋಗದಿಂದ ದೂರವಾಗಬಹುದು ಎಂದರು. ವೈದ್ಯರುಗಳಾದ ಡಾಕ್ಟರ್ ಮೇಜರ್ ಆರಾಧ್ಯ. ಡಾ ಪ್ರಕಾಶ್ .ಡಾ ಸುರೇಶ್. ಡಾಕ್ಟರ್ ಕಾಂತರಾಜು ಡಾಕ್ಟರ್ ಹನುಮಂತ ಜೋಶಿ. ನಿವೃತ್ತ ಪ್ರಾಂಶುಪಾಲ ಮಹಾದೇವಯ್ಯ ವಕೀಲರಾದ ರವಿಕುಮಾರ್ ಮಾತನಾಡಿದರು.
ಕಬ್ಬು ಬೆಳೆಗಾರರ ಸಂಘದ ತಾಲೂಕು ಉಪಾಧ್ಯಕ್ಷ ಅಂಬಳೆ ಮಾದೇಸ್ವಾಮಿ ಸ್ವಾಗತ ಮಾಡಿ ಮಂಜುನಾಥ್ ಕಾರ್ಯಕ್ರಮ ನಿರೂಪಣೆ ಮಾಡಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್ . ಕಿರಗಸೂರು ಶಂಕರ್ ಆಡ್ಯರವಿ. ಬರಡನಪುರ ನಾಗರಾಜ್. ಇದ್ದರು. ಐನೂರಕ್ಕೂ ಹೆಚ್ಚು ಜನರು ವೈದ್ಯಕೀಯ ತಪಾಸಣೆಯಲ್ಲಿ ಮಾಸ್ ಧರಿಸಿ ಅಂತರ ಕಾಪಾಡಿಕೊಂಡು ಭಾಗವಹಿಸಿದರು.
Key words: Health Check-up -Vaccination -Program -Coronation Service – Rural People-kurubur shanthakumar