ಮೈಸೂರು,ಜೂನ್,24,2021(www.justkannada.in): ಮೈಸೂರಿನಲ್ಲಿ ಪತ್ತೆಯಾಗಿರುವ ಡೆಲ್ಟಾ ವೈರಸ್ ಮತ್ತು ಡೆಲ್ಟಾ ಫ್ಲಸ್ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಮೈಸೂರಿನಲ್ಲಿ ಮೂರು ಡೆಲ್ಟಾ ವೈರಸ್ ಹಾಗೂ ಒಂದು ಡೆಲ್ಟಾ ಫ್ಲಸ್ ವೈರಸ್ ಪ್ರಕರಣವನ್ನ ಆರೋಗ್ಯ ಇಲಾಖೆ ಖಚಿತಪಡಿಸಿದ್ದು ಈ ಸಂಬಂಧ ಮೈಸೂರು ಡಿಎಚ್ಓ ಪ್ರಕಟಣೆ ಹೊರಡಿಸಿದ್ದಾರೆ.
.ಮೇ 13 ರಂದೇ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ ಲ್ಯಾಬ್ ಗೆ ಗಂಟಲು ದ್ರವ ಮಾದರಿ ಕಳುಹಿಸಲಾಗಿತ್ತು. ಅದರಲ್ಲಿ ಮೂವರಿಗೆ ರೂಪಾತರ ಕೊರೋನಾ ತಳಿ ಡೆಲ್ಟಾ ವೈರಸ್ ಇರುವುದು ಪತ್ತೆ ಆಗಿದೆ. ಒಬ್ಬರಲ್ಲಿ ಡೆಲ್ಟಾ ಫ್ಲಸ್ ವೈರಸ್ ಪತ್ತೆಯಾಗಿದೆ. ಡೆಲ್ಟಾ ವೈರಸ್ ಪೀಡಿತರಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು. ಯಾವುದೇ ಗಂಭೀರ ಸ್ವರೂಪದ ಲಕ್ಷಣಗಳು ಕಂಡುಬಂದಿರುವುದಿಲ್ಲ.
ಹೋಂ ಐಸೋಲೇಷನ್ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯ ಇಲ್ಲ ಡಿಎಚ್ ಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Health Department – clarification – Delta Virus Delta plus- case -Mysore.