ನವದೆಹಲಿ, ಜೂನ್16, 2019 (www.justkannada.in): ಭಾರತ-ಪಾಕ್ ನಡುವೆ ಹೈ-ವೋಲ್ಟೇಜ್ ಪಂದ್ಯ ನೋಡಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.
ಇಂತಹ ಹೈ-ವೋಲ್ಟೇಜ್ ಪಂದ್ಯಗಳ ವೇಳೆ ಬೆಟ್ಟೀಂಗ್ ಸಹ ಗರಿಗೆದರಿದ್ದು, ಬರೊಬ್ಬರಿ 100 ಕೋಟಿ ರೂಪಾಯಿಗಳ ವರೆಗೆ ಬೆಟ್ಟಿಂಗ್ ಬಿಡ್ ನಡೆದಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ ಸಿಆರ್) ನ ಸಟ್ಟಾ ಬಜಾರ್ ನಲ್ಲಿ ಭಾರತ-ಪಾಕ್ ನಡುವಿನ ಪಂದ್ಯಕ್ಕೆ ಬರೊಬ್ಬರಿ 100 ಕೋಟಿ ರೂಪಾಯಿ ಬೆಟ್ಟಿಂಗ್ ಬಿಡ್ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭೂಗತ ಲೋಕದೊಂದಿಗೆ ನಂಟು ಹೊಂದಿರುವ ವ್ಯಾಪಾರಿ ವರ್ಗದವರು ಹಾಗೂ ಬುಕ್ಕಿಗಳು ಬೆಟ್ಟಿಂಗ್ ನಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತ-ಪಾಕ್ ನಡುವಿನ ಪಂದ್ಯದ ಹಿನ್ನೆಲೆಯಲ್ಲಿ ಸಟ್ಟಾ ಬಜಾರ್ ನ ಕಾರ್ಯಾಚರಣೆಗಳ ಮೇಲೆ ನಿಗಾ ಇಟ್ಟಿದ್ದೇವೆ ಎಂದು ದೆಹಲಿಯ ಉಪ ಆಯುಕ್ತ ಮಧುರ್ ವರ್ಮ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಅತ್ಯಾಧುನಿಕ ಸಾಫ್ಟ್ ವೇರ್ ಬಳಕೆ ಮಾಡಿ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿಗಳನ್ನು ಉತ್ತರ ದೆಹಲಿಯಲ್ಲಿ ಬಂಧಿಸಲಾಗಿತ್ತು.