ಕೆಮಿಕಲ್ ಪದಾರ್ಥಗಳ ಗೋಡೌನ್ ಭಾರೀ ಅಗ್ನಿ ಅವಘಡ: ಗ್ರಾಮಸ್ಥರಲ್ಲಿ ಆತಂಕ

ಮೈಸೂರು,ಫೆಬ್ರವರಿ,26,2025 (www.justkannada.in): ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕತ್ವಾಡಿಪುರ ಗ್ರಾಮದಲ್ಲಿ ಕೆಮಿಕಲ್ ಪದಾರ್ಥಗಳ ಗೋಡೌನ್ ನಲ್ಲಿ ಭಾರೀ ಅಗ್ನಿಅವಘಡ ಸಂಭವಿಸಿದ್ದು ಆತಂಕ ಸೃಷ್ಟಿಸಿದೆ.

ನಂಜನಗೂಡು ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕತ್ವಾಡಿಪುರ ಗ್ರಾಮದ ಗ್ಯಾಸ್ ಗೋಡೌನ್ ಬಳಿ ಇರುವ ಕೆಮಿಕಲ್ ಮಿಶ್ರಿತ  ಹಳೆ ಪದಾರ್ಥಗಳ ಗೋಡನ್ ನಲ್ಲಿ ಏಕಾಏಕಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕತ್ವಾಡಿಪುರ ಗ್ರಾಮಸ್ಥರು ಮನೆ ಬಿಟ್ಟು ರಸ್ತೆಗೆ ಬಂದಿದ್ದಾರೆ.

ಮೈಸೂರು ಮೂಲದ ವ್ಯಕ್ತಿ ಜುಬಲಿಯಂಟ್ ಕಾರ್ಖಾನೆಯಿಂದ ಕೆಮಿಕಲ್ ಮಿಶ್ರಿತ ಹಳೆ ಟ್ಯಾಂಕರ್ ಮತ್ತು ಇತರೆ ಪದಾರ್ಥಗಳನ್ನು ತಂದು ಸಂಗ್ರಹಿಸಿಟ್ಟಿದ್ದು, ಇದಕ್ಕಿದ್ದಂತೆ ಈ ಕೆಮಿಕಲ್ ಮಿಶ್ರಿತ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕಾವು ಹೆಚ್ಚಾಗುತ್ತಿದ್ದಂತೆ ಕೆಮಿಕಲ್ ಮಿಶ್ರಿತ ಹಳೆ ಟ್ಯಾಂಕ್ ಬ್ಲಾಸ್ಟ್ ಆಗಿದೆ. ಹಳೆ ಟ್ಯಾಂಕ್ ಬ್ಲಾಸ್ಟ್ ಆದ ಶಬ್ದಕ್ಕೆ ಹೆದರಿ ಕತ್ವಾಡಿಪುರ ಗ್ರಾಮಸ್ಥರು ಮನೆಯಿಂದ ಹೊರ ಬಂದಿದ್ದಾರೆ.

ಇನ್ನು ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮದ ಒಳಭಾಗದಲ್ಲಿರುವ ಗ್ಯಾಸ್ ಗೋಡನ್ ಕೆಮಿಕಲ್ ಮಿಶ್ರಿತ ಗೋಡೌನ್ ಗಳನ್ನು ಸ್ಥಳಾಂತರ ಮಾಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Key words: Heavy fire, chemicals, Mysore, Anxiety