ಬೆಳಗಾವಿ,ಆ,6,2019(www.justkannada.in): ಮಹಾರಾಷ್ಟ್ರದಲ್ಲಿ ಮಳೆರಾಯ ಅಬ್ಬರಿಸುತ್ತಿರುವ ಪರಿಣಾಮ ಕೃಷ್ಣ ನದಿಗೆ ಹೆಚ್ಚಿನ ನೀರು ಬಿಡಲಾಗುತ್ತಿದ್ದು ಇದರಿಂದಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ನಿರಂತರ ಸುರಿಯುತ್ತಿರುವ ಮಹಾಮಳೆಗೆ ಶಾಸಕ ಅಂಜಲಿ ನಿಂಬಾಳ್ಕರ್ ಅವರ ಮನೆ ಜಲಾವೃತವಾಗಿದೆ.
ಬೆಳಗಾವಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ಭಾರಿ ಮಳೆಯಿಂದಾಗಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಸಂಪೂರ್ಣ ಜಲಾವೃತವಾಗಿದೆ. ಮನೆಯ ನಾಲ್ಕು ಕಡೆಯಿಂದ ಮಲಪ್ರಭೆ ನದಿಯ ನೀರು ಸುತ್ತುವರೆದಿದೆ. ಕೊಯ್ನಾ ಜಲಾಶಯ ಭರ್ತಿಯಾಗಿದ್ದು ಹೀಗಾಗಿ ಕೃಷ್ಣಾನದಿಗೆ ಹೆಚ್ಚಿನ ನೀರು ಹರಿಸಲಾಗಿದೆ.
ಇನ್ನು ಬೆಳಗಾವಿಯ 8 ತಾಲ್ಲೂಕುಗಳಲ್ಲಿ ಸುಮಾರು 300 ಮನೆಗಳು ನೆಲಸಮವಾಗಿವೆ ಎನ್ನಲಾಗಿದೆ. ಖಾನಾಪುರ, ಬೈಲಹೊಂಹಲ, ಗೋಕಾಕ್ ಸೇರಿದಂತೆ 8 ತಾಲ್ಲೂಕುಗಳಲ್ಲಿ ಮನೆಗಳು ನೆಲಸಮವಾಗಿವೆ. ಹಾಗೆಯೇ ರಾಷ್ಟ್ರೀಯ ಹೆದ್ದಾರಿ 4 ಜಲಾವೃತಗೊಂಡು ಸಂಚಾರ ಸ್ಥಗಿತವಾಗಿದೆ.
Key words: Heavy rain – Belgavi- Anjali Nimbalkar –house