ಮೈಸೂರು,ಜುಲೈ,6,2022(www.justkannada.in): ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿರಂತರ ಮಳೆ ಹಿನ್ನೆಲೆ ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ನಿರಂತರ ಮಳೆ ಮತ್ತು ಲ್ಯಾಂಡ್ ಸ್ಲೈಡ್ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕಳೆದ ಭಾರಿ ಎಲ್ಲೆಲ್ಲಿ ಲ್ಯಾಂಡ್ ಸ್ಲ್ಯಾಡ್ ಆಗಿದೆ. ಆ ಸ್ಥಳಗಳನ್ನ ಸ್ಥಳಾಂತರ ಮಾಡಲು ತಿಳಿಸಿದ್ದೇನೆ. ರೋಡ್ ಗಳು ಬ್ಲಾಕ್ ಆಗದಂತೆ ನೋಡಿಕೊಳ್ಳಲು ಹೇಳಿದ್ದೇನೆ.ಇಂದು ರಾತ್ರಿ ಕಂದಾಯ ಸಚಿವರು ಮಡಿಕೇರಿ ಹೋಗುತ್ತಿದ್ದಾರೆ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಜಾಸ್ತಿ ಯಾಗಿದೆ. ಕಡಲ ಕೊರೆತ ಜಾಸ್ತಿಯಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಿ. ಮನೆಗಳು ಹಾನಿಯಾಗಿದ್ದರೇ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದೇನೆ ಎಂದರು.
ಕಡಲ ಕೊರತ ಶಾಸ್ವತ ಪರಿಹಾರಕ್ಕೆ ಹೊಸ ಟೆಕ್ನಾಲಜಿ ಬಳಕೆ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಟ್ರಯಲ್ ಬೇಸಿಸ್ ಮೇಲೆ ಮಾಡಲಾಗುತ್ತೆ. ಇನ್ನು ಮೈಸೂರಿನ ಎನ್ ಡಿಆರ್ ಎಫ್ ಕೊಡಗಿಗೆ ಮೀಸಲು. ಮಂಗಳೂರಿನ ಎನ್ ಡಿಆರ್ ಎಫ್ ನ ಮಂಗಳೂರಿಗೆ, ಮಂಗಳೂರಿನ ಎಸ್ ಡಿಆರ್ ಎಫ್ ತಂಡವನ್ನ ಉಡುಪಿ ಮತ್ತು ಕಾರವಾರ ಜಿಲ್ಲೆಗೆ ನಿಯೋಜನೆ ಮಾಡಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಬಳಿ 10 ಕೋಟಿಗೂ ಹೆಚ್ಚು ಹಣ ಇದೆ. ಅವಶ್ಯಕತೆ ಇದ್ದಲ್ಲಿ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ರಸ್ತೆಗಳು ಕೆರೆಯಂತಾಗುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಬೆಂಗಳೂರಿನಲ್ಲಿ ಕೆರೆಯ ಅಂಗಳದಲ್ಲಿ, ಸುತ್ತಮುತ್ತ ಹಾಗೂ ಕೆರೆಯ ಮೇಲೆ ಮನೆ ಕಟ್ಟಿದ್ದಾರೆ. ರಾಜಕಾಲುವೆ ದುರಸ್ತಿ ಮಾಡಲು 16 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜಕಾಲುವೆ ಸರಿ ಮಾಡಿದರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ಪ್ರವಾಹದಿಂದ ಗ್ರಾಮಗಳ ಮುಳುಗಡೆಗೆ ಶಾಶ್ವತ ಪರಿಹಾರ ವಿಚಾರ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಬಿ.ಎಸ್.ವೈ ಸರ್ಕಾರದಲ್ಲಿ 60 ಹಳ್ಳಿಗಳನ್ನ ಶಿಫ್ಟ್ ಮಾಡಿತ್ತು. ಆದ್ರೆ ಪ್ರವಾಹ ಕಡಿಮೆಯಾದ ಮೇಲೆ ಮತ್ತೆ ಜನರು ಅದೇ ಹಳ್ಳಿಗಳಿಗೆ ಹೋದ್ರು. ಹೀಗಾಗಿ ಪ್ರವಾಹ ಪೀಡಿತ ಹಳ್ಳಿಗಳನ್ನ ಗುರುತು ಮಾಡಿ ಸುತ್ತಮುತ್ತಲಿನ ಎತ್ತರದ ಜಾಗದಲ್ಲಿ ನಿರ್ಮಿತಿ ಕೇಂದ್ರಗಳನ್ನ ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಶಾಲಾ ಮಕ್ಕಳಿಗೆ ಶೂ ಮತ್ತು ಬೈಸಿಕಲ್ ಈ ವರ್ಷವೇ ಕೊಡಲಾಗುವುದು. ಸ್ವಲ್ಪ ವಿಳಂಬವಾಗಿದೆ, ಇದನ್ನ ಸಚಿವ ನಾಗೇಶ್ ಇದನ್ನ ನೋಡಿಕೊಳ್ಳುತ್ತಿದ್ದಾರೆ. ಈ ವರ್ಷವೇ ಶೂ ಮತ್ತು ಬೈಸಿಕಲ್ ವಿತರಣೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
Key words: Heavy rain –DC- all action-mysore-CM Bommai.