ಧಾರಾಕಾರ ಮಳೆಗೆ  ಕೆ.ಆರ್.ಪೇಟೆ – ಮೈಸೂರು ಮುಖ್ಯರಸ್ತೆ ಜಲಾವೃತ: ವಾಹನ ಸವಾರರ ಪರದಾಟ…

ಮಂಡ್ಯ,ಅ,22,2019(www.justkannada.in):  ರಾಜ್ಯದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ  ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜನತೆ ವರುಣನ ಆರ್ಭಟಕ್ಕೆ ತತ್ತರಿಸಿದ್ದಾರೆ. ಈ ನಡುವೆ ಮಂಡ್ಯ, ಮೈಸೂರು, ಬೆಂಗಳೂರು ಭಾಗದಲ್ಲೂ ಮಳೆರಾಯನ ಅಬ್ಬರವೇನು ಕಡಿಮೆ ಇಲ್ಲ.

ಅಂತೆಯೇ ಮಂಡ್ಯದಲ್ಲಿ ನಿನ್ನೆ ರಾತ್ರಿಯಿಂದ  ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಕೆ.ಆರ್.ಪೇಟೆ- ಮೈಸೂರು ಮುಖ್ಯ ರಸ್ತೆ ಜಲಾವೃತವಾಗಿದೆ. ಮಳೆಯ ಹಿನ್ನೆಲೆಯಲ್ಲಿ ಕೆರೆಗಳು ಕೋಡಿ ಬಿದ್ದು ರಸ್ತೆಗಳಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದೆ. ಹೀಗಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಜಲಾವೃತವಾದ ಹಿನ್ನೆಲೆ ಕೆ.ಆರ್.ಪೇಟೆ ಮೈಸೂರು ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು, .ಕಿ.ಮೀ ಗಟ್ಟಲೆ  ವಾಹನಗಳು ಸಾಲುಗಟ್ಟಿ ನಿಂತಿವೆ. ಮೈಸೂರಿಗೆ ಹೋಗುವ ಬಸ್ ಗಳನ್ನು ಕೆ.ಎಸ್.ಆರ್.ಟಿ.ಸಿ ಸಾರಿಗೆ ಇಲಾಖೆ ಬಂದ್ ಮಾಡಿದ್ದು, ದೂರಕ್ಕೆ ಪ್ರಯಾಣಿಸುವ ಪ್ರಯಾಣಿಕರು ಇದರಿಂದ ತತ್ತರಿಸುವಂತಾಗಿದೆ. ಒಟ್ಟಾರೆ ರಾಜ್ಯದಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆರಾಯ ಇನ್ನಿಲ್ಲದ ಅವಾಂತರ ಸೃಷ್ಠಿಸಿದ್ದಾನೆ.

Key words: Heavy rain- mandya – k.r pete-mysore-road-traffic