ಮೈಸೂರು,ಆ,12,2019(www.justkannada.in): ಮೈಸೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು ಸಾಕಷ್ಟು ಅವಾಂತರ ಸೃಷ್ಠಿಸಿವೆ. ಈ ನಡುವೆ ವರುಣನ ಆರ್ಭಟಕ್ಕೆ ಕಾಡೆಮ್ಮೆಯೊಂದು ಬಲಿಯಾಗಿರುವ ಘಟನೆಹುಣಸೂರಿನ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ಭಾರಿ ಮಳೆ ಹಿನ್ನೆಲೆ ಲಕ್ಷ್ಮಣ ತೀರ್ಥ ನದಿಯಲ್ಲಿ ಕಾಡೆಮ್ಮೆ ಮೃತಪಟ್ಟು ನೀರಿನಲ್ಲಿ ತೇಲಿ ಬಂದಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಉದ್ಯಾನವನ ನಾಗರಹೊಳೆಯ ನೀರಿನಲ್ಲಿ ಕಾಡೆಮ್ಮೆ ಶವ ತೇಲಿ ಬಂದಿದ್ದು, ಇದನ್ನ ಕಂಡ ಕೆಲ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕಾಡೆಮ್ಮೆ ಸಾವಿನ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.
Key words: Heavy rains -Mysore –dead-bison.