ಬೆಂಗಳೂರು, ಜನವರಿ 09, 2021 (www.justkannada.in): ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಶುಕ್ರವಾರದಿಂದ ಭಾರೀ ಪ್ರಮಾಣದಲ್ಲಿ ಹಿಮವರ್ಷ ಸುರಿಯುತ್ತಿದ್ದು, ಕಾಶ್ಮೀರದಲ್ಲಿ ವಿಮಾನ ಸಂಚಾರಕ್ಕೆ ಅಡ್ಡಿಯಾಗಿದೆ.
10ಕ್ಕೂ ಅಧಿಕ ವಿಮಾನಗಳ ಸಂಚಾರ ರದ್ದು ಮಾಡಲಾಗಿದ್ದರೆ, ಹಲವು ವಿಮಾನಗಳು ಗಂಟೆಗಳ ಕಾಲ ವಿಳಂಬವಾಗಿದೆ.
ಶ್ರೀನಗರದಲ್ಲಿ 4 ಇಂಚು ಹಿಮವರ್ಷವಾಗಿದೆ. ಗುಲ್ಮಾರ್ಗ್ನಲ್ಲಿ ಸುಮಾರು ಒಂದು ಅಡಿಯಷ್ಟು, ಕಾಜಿಗುಂದ್ ನಗರದಲ್ಲಿ 8 ಇಂಚು ಮತ್ತು ಶೋಪಿಯಾನ್ನಲ್ಲಿ 15 ಇಂಚು ಹಿಮವರ್ಷವಾಗಿದೆ. ಈ ಸೀಸನ್ನ ಮೊದಲ ಹಿಮ ಮಳೆಯಾಗಿದೆ. ಇದರಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಹಿಮಾವೃತವಾಗಿದ್ದು, ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ದೇಗುಲ ಕೂಡ ಹಿಮದಿಂದ ಆವೃತವಾಗಿದೆ.
ಹಿಮವರ್ಷದಿಂದ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ಬನೀಹಾಲ್-ಬಾರಾಮುಲ್ಲಾ ನಡುವಿನ ರೈಲನ್ನು ಸ್ಥಗಿತಗೊಳಿಸಲಾಗಿದೆ.