ಕೊಡಗು,ಜೂ,11,2020(www.justkannada.in): ಮಳೆಗಾಲ ಶುರುವಾಗಿರುವ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.
ಮಳೆಗಾಲ ಹಿನ್ನೆಲೆ ಮುಂಜಾಗ್ರತೆಯಿಂದ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಮರದ ದಿಮ್ಮಿ, ಮರಳು ಸಾಗಾಟ ನಿಷೇಧಿಸಲಾಗಿದೆ. 1,62,00 ಕೆಜಿಗಿಂತ ಹೆಚ್ಚು ತೂಕದ ಸರಕುಗಳನ್ನ ಸಾಗಿಸುವಂತಿಲ್ಲ. ಈ ಆದೇಶ ಇಂದಿನಿಂದ ಆಗಸ್ಟ್ 10ರವರೆಗೆ ಜಾರಿಯಲ್ಲಿರುತ್ತದೆ.
ಇನ್ನು ಅನಿಲ ಟ್ಯಾಂಕರ್ , ಬಸ್, ಹಾಲಿನ ವಾಹನಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
Key words: Heavy –Vehicle- travel-Prohibition – Restriction- Kodagu District