ಬೆಳಗಾವಿ,ಸೆಪ್ಟೆಂಬರ್,10,2020(www.justkannada.in) : ಡ್ರಗ್ ಮುಕ್ತ ರಾಜ್ಯ ಮಾಡಲು ಸರಕಾರ ಸಿದ್ದ. ಡ್ರಗ್ಸ್ ಮಾಫಿಯಾದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ಹೆಡೆಮುರಿ ಕಟ್ಟುತ್ತೇವೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಮಾತನಾಡಿರುವ ಅವರು, ಸಿಸಿಬಿ ತನಿಖಾಧಿಕಾರಿಗಳಿಗೆ ಸಂಪೂರ್ಣ ಸ್ವಯತ್ತೆ ನೀಡಲಾಗಿದೆ. ಯಾರ ಒತ್ತಡಕ್ಕೂ ಮಣಿಯದಂತೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಲಾಗಿದೆ ಎಂದರು.
ಈ ತನಿಖೆ ಕುರಿತಂತೆ ಗೃಹ ಸಚಿವರು ವಿಶೇಷ ನಿಗವಹಿಸಿದ್ದು, ಯಾವುದೇ ರಾಜಕಾರಣಿ ಮಕ್ಕಳು, ಪ್ರಭಾವಿ ವ್ಯಕ್ತಿಗಳಿದ್ದರೂ, ಯಾರನ್ನು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
key words : Hedemuri-drug mafia-Let’s build-DCM Laxman Savadi