ಕೋವಿಡ್ ಲಸಿಕೆ ಪಡೆಯಲು ಹಿಂದೇಟು: ಮಹತ್ವದ ಕ್ರಮಕ್ಕೆ ಮುಂದಾದ ಸರ್ಕಾರ..?

ಬೆಂಗಳೂರು,ನವೆಂಬರ್,18,2021(www.justkannada.in):  ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದು ಹೀಗಾಗಿ ಕೊವೀಡ್ ಲಸಿಕೆ ಬಗ್ಗೆ ಜನರಲ್ಲಿ ತಾತ್ಸಾರ ಮೂಡಿದೆ. ಈ  ಹಿನ್ನೆಲೆಯಲ್ಲಿ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದು, ಇದೀಗ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ.

ಕರೋನ ಕೇಸ್ ಕಡಿಮೆಯಾದ ಬಳಿಕ ಜನತೆ ಎರಡನೇ ಡೋಸ್‌ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದು ಆರೋಗ್ಯ ಇಲಾಖೆ ದೊಡ್ಡ ತಲೆನೋವಾಗಿ ಪರಿಣಾಮಿಸಿದೆ. ಹೀಗಾಗಿ ಇನ್ಮುಂದೆ ನೀವು ಮನೆಯಿಂದ ಹೊರಗೆ ಬರಲು ಎರಡು ಡೋಸ್‌ ಕರೋನ ವ್ಯಾಕ್ಸಿನ್‌ ಪಡೆದುವರಿಗೆ ಮಾತ್ರ ಅವಕಾಶ ನೀಡುವುದರ ಬಗ್ಗೆ ರಾಜ್ಯ ಸರ್ಕಾರ  ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ವ್ಯಾಕ್ಸಿನ್‌ ಎರಡು ಡೋಸ್‌ ಪಡೆದವರು ಮಾತ್ರ ಹೊರ ಬರುವುದರ ಕುರಿತು ಈಗಾಗಲೇ ವಿದೇಶದಲ್ಲಿ ತೀರ್ಮಾನವನ್ನು ತೆಗದುಕೊಳ್ಳಲಾಗಿದೆ.  ಈ ಬಗ್ಗೆ ರಾಜ್ಯದಲ್ಲೂ ಕೂಡ ತಜ್ಞರ ಸಮಿತಿ ಸರ್ಕಾರದ ಮುಂದೆ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ  ಎಂದು ಹೇಳಲಾಗುತ್ತಿದೆ.

ಈ ನಡುವೆ ಬೆಂಗಳೂರಿನ 1 ಕೋಟಿ ಜನರ ಪೈಕಿ ಕೇವಲ 40 ಲಕ್ಷ  ಮಂದಿ ಮಾತ್ರ ಎರಡು ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದ್ದು,  ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಮುಂದಾಗಿದೆ ಎನ್ನಲಾಗಿದೆ.

ಒಂದು ವೇಳೆ ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದ್ರೆ ಎರಡೂ ಡೋಸ್‌ ಪಡೆದವರು ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅವಕಾಶವಿರುತ್ತದೆ.

Key words: hesitate -covid vaccine-action- Governmen

ENGLISH SUMMARY…

Hesitation to get COVID vaccination: Govt. takes significant step…?
Bengaluru, November 18, 2021 (www.justkannada.in): As the COVID-19 Pandemic is declining in the State, hesitancy has appeared among the people in getting COVID vaccination. As the people are hesitant to take the vaccination, the government has taken a significant step now.
The hesitation of several people in taking the second dose vaccine following the decline in the number of Corona cases has resulted in creating a headache for the Health Department. In this context, the State Government is contemplating making it mandatory for the citizens to produce the certificate of having both the doses come out of the houses!
It is learnt that in several countries, only people who have taken both doses of the COVID vaccine are allowed to come out of the houses. Hence, the team of experts in Karnataka has also advised the government to follow the same procedure.
As of now, 40 lakh people have taken both doses of the vaccine in Bengaluru, which has one crore population. This has indeed led to anxiety forcing the State Government to take this significant step.
In case if the State Government implements this, only people who have taken both the doses of COVID vaccine can only come out of the houses.
Keywords: State Government/ COVID-19 Pandemic/ two doses/ significant decision?