ಮೈಸೂರು,ಆಗಸ್ಟ್,2,2021(www.justkannada.in): ಮೈಸೂರಿನಲ್ಲಿ ಹೈಟೆಕ್ ಟ್ರಾಫಿಕಿಂಗ್ ದಂಧೆ ಕಂಡು ಬಂದಿದ್ದು ಇಬ್ಬರು ದಂಧೆಕೋರರನ್ನ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಅಶ್ರಫ್ , ಶಮಿಮ್ ಬಂಧಿತ ಆರೋಪಿಗಳು. ಈ ಕುರಿತು ಮಾಹಿತಿ ನೀಡಿರುವ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಬಂಧಿತರು ಅಂತರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳಾಗಿ ಕನ್ವರ್ಟ್ ಮಾಡುತ್ತಿದ್ದರು. ಸಿಮ್ ಬಾಕ್ಸ್ ಮತ್ತು ರೂಟರ್ ಮೂಲಕ ಅಂತರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳಾಗಿ ಕನ್ವರ್ಟ್ ಮಾಡುತ್ತಿದ್ದರು.
ಇದರಿಂದಾಗಿ ಸರ್ಕಾರ ಮತ್ತು ಟೆಲಿಕಾಂ ಕಂಪನಿಗಳಿಗೆ ಕೋಟ್ಯಾಂತರ ನಷ್ಟ ಉಂಟಾಗಿದೆ. ಬಂಧಿತರಿಂದ 500ಕ್ಕೂ ಹೆಚ್ಚು ಸಿಮ್, ಸಿಮ್ ಬಾಕ್ಸ್, ರೂಟರ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನ ಮತ್ತಷ್ಟು ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ತಿಳಿಸಿದ್ದಾರೆ.
Key words: Hi-tech -Call Trafficking- Mysore-two-arrest