ಮೈಸೂರು,ಡಿಸೆಂಬರ್,30,2024 (www.justkannada.in): 2024ರ ವರ್ಷಾಂತ್ಯ ಹಿನ್ನೆಲೆ, ನೂತನ ವರ್ಷಾಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸರ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಆದೇಶ ಆದೇಶ ಹೊರಡಿಸಿದ್ದಾರೆ. ನೂತನ ವರ್ಷದ ಶುಭ ಕೋರುವ ನೆಪದಲ್ಲಿ ಅಸಭ್ಯ ವರ್ತನೆ ಮಾಡಿದ್ದಲ್ಲಿ ಸೂಕ್ತ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದು, ಮಹಿಳೆಯರ ರಕ್ಷಣೆಗೆ ಪಿಂಕ್ ಗರುಡ ಪಡೆ ಗಸ್ತು ತಿರುಗಲಿದೆ. ವಿದ್ವಂಸಕ ಕೃತ್ಯ ತಡೆಗೆ ಶ್ವಾನ ದಳ ಫೀಲ್ಡ್ ಗಿಳಿಯಲಿದ್ದು, ಸಂಭ್ರಮದ ನೆಪದಲ್ಲಿ ವೀಲಿಂಗ್ ಡ್ರಾಗ್ ರೇಸ್, ಕರ್ಕಸ ಶಬ್ದ ಮಾಡುವುದನ್ನು ತಡೆಗಟ್ಟಲು ಕ್ಷಿಪ್ರ ಪಡೆ ಸನ್ನದ್ದವಾಗಿದೆ.
ಭದ್ರತೆಗಾಗಿ 4 ಡಿಸಿಪಿ, 12ಎಸಿಪಿ, 32ಪಿಐ, 53ಪಿಎಸ್ ಐ, 112ಎಎಸ್ ಐ, 895 ಹೆಚ್ ಸಿ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ 8 ಸಿಎಆರ್ ತುಕಡಿ, 4 ಕೆಎಸ್ ಆರ್ ಪಿ, 2 ಕಮಾಂಡೊ ಪಡೆ, 1 ಶ್ವಾನ ದಳ, 2 ಎಎಸ್ ಪಿ ತಂಡಗಳ ಕಣ್ಗಾವಲು ಇರಿಸಲಾಗಿದೆ. ನಿಯಮ ಮೀರಿದ್ರೆ ದಂಡ ಬೀಳೋದು ಗ್ಯಾರಂಟಿ. ಮಧ್ಯರಾತ್ರಿ 1ಗಂಟೆಗೆ ಹೊಸ ಸಂಭ್ರಮಚರಣೆ ಮುಕ್ತಾಯಗೊಳಿಸಲು ಪೋಲೀಸರು ಗಡುವು ನೀಡಿದ್ದಾರೆ.
Key words: High alert, Mysore, New Year, celebration