ಬೆಂಗಳೂರು, ಅಕ್ಟೋಬರ್ 22, 2022(www.justkannada.in): ಅಭಿವೃದ್ಧಿ ಹೊಂದುತ್ತಿರುವ ದೇಶ, ಬಡವರು ಹಾಗೂ ಮಧ್ಯಮ ವರ್ಗದ ಜನರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಗಳ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತಿದೆ. ಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಸಾವಿನ ಪ್ರಮಾಣಕ್ಕಿಂತ, ಅಸಾಂಕ್ರಾಮಿಕ ರೋಗದಿಂದ ಎದುರಾಗುತ್ತಿರುವ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ವರ್ಲ್ಡ್ ಸ್ಟ್ರೋಕ್ ಡೇ ಅಂಗವಾಗಿ ಬೆಂಗಳೂರು ಮೆಡಿಕಲ್ ಕಾಲೇಜ್ ಸಭಾಂಗಣದಲ್ಲಿ ನಡೆದ ” ಬೆಂಗಳೂರು ಸ್ಟ್ರೋಕ್ ನರ್ಸಿಂಗ್ ಕಾನ್ ಕ್ಲೈವ್ 2022″ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಕಾರಣಗಳಿಂದಾಗಿ ಶೇ. 70ರಷ್ಟು ಪ್ರಕರಣಗಳು ಬಡತನ ರೇಖೆಗಿಂತ ಕೆಳಗಡೆ, ಮಧ್ಯಮ ವರ್ಗದವರಲ್ಲಿ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತಿದೆ. ಬಡ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ ಎಂದು ಹೇಳಿದರು.
ಅಕ್ಟೋಬರ್ 29 ರಂದು ವಿಶ್ವ ಸ್ಟ್ರೋಕ್ ದಿನವನ್ನಾಚರಿಸಲಾಗುತ್ತಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಈ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಸತತವಾಗಿ ನಡೆಯುತ್ತಿವೆ. ಅಚ್ಚರಿ ಅಂದರೆ ಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಸಾವಿಗಿಗಿಂತ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಸೇರಿದಂತೆ ಇತರೆ ಅಸಾಂಕ್ರಮಿಕ ರೋಗಗಳಿಂದ ಉಂಟಾಗುತ್ತಿರುವ ಸಾವು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮಗಳನ್ನು ಕೈಗೊಂಡಿವೆ. ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬಾರದೆ ಇರುವ ಹಾಗೇ ನೋಡಿಕೊಳ್ಳುವುದೇ ಉತ್ತಮ. ಹೀಗಾಗಿ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಗಳು ಸರ್ಕಾರದಿಂದಲೇ ನಡೆಯುತ್ತಿದೆ ಎಂದರು.
ಬಡತನ ರೇಖೆಗಿಂತ ಕೆಳಗಿರುವ, ಕಡಿಮೆ ಶಿಕ್ಷಣ ಹೊಂದಿರುವ, ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿರದ ಗ್ರಾಮೀಣ ಜನರಿಗೆ ಆರೋಗ್ಯದ ಮಹತ್ವವನ್ನು ತಿಳಿ ಹೇಳುವುದು ದಾದಿಯರ ಪಾಲಿನ ಅತಿದೊಡ್ಡ ಕೆಲಸವಾಗಿದೆ. ಸ್ಟ್ರೋಕ್ ರೋಗಿಗೆ ವೈದ್ಯರು ಚಿಕಿತ್ಸೆ ಮಾತ್ರ ನೀಡುತ್ತಾರೆ. ಆದರೆ ಉಳಿದ ಕೆಲಸಗಳನ್ನು ಆರೈಕೆ ಮೂಲಕವೇ ದಾದಿಯರು ಮಾಡುತ್ತಾರೆ. ಸರಿಯಾದ ಆರೈಕೆ, ಕಾಯಿಲೆ ಬಗ್ಗೆ ತಿಳಿ ಹೇಳುವುದು ಮತ್ತು ರೋಗಿಗೆ ಆತ್ಮವಿಶ್ವಾಸ ತುಂಬುವುದು ದಾದಿಯರ ಮೊದಲ ಕೆಲಸವಾಗಿದೆ. ಇದರಿಂದಲೇ ಚಿಕಿತ್ಸೆ ಪಡೆಯುತ್ತಿರುವವರು ಗುಣಮುಖರಾಗಲು ಸಾಧ್ಯ ಎಂದು ಹೇಳಿದರು.
ದೇಶದಲ್ಲಿ ಖಿನ್ನತೆ, ಹೈಪರ್ ಟೆನ್ಷನ್ ಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತ ಸಕ್ಕರೆ ಕಾಯಿಲೆಯಲ್ಲಿ ವಿಶ್ವಕ್ಕೆ ರಾಜಧಾನಿ ಯಾಗುತ್ತಿದೆ. ಎಷ್ಟು ರಕ್ತದೊತ್ತಡ ಕಡಿಮೆ ಮಾಡುತ್ತೇವೆಯೋ ಅಷ್ಟು ಸ್ಟ್ರೋಕ್ ಗೆ ಒಳಗಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ಸ್ಟ್ರೋಕ್ ಗೆ ಮೊದಲ ಕಾರಣವೇ ಹೈಪರ್ ಟೆನ್ಷನ್ ಆಗಿದೆ. ಜೀವನ ಶೈಲಿ, ಆಹಾರ ಪದ್ಧತಿ, ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ಸ್ಟ್ರೋಕ್ ಗೆ ಒಳಗಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಸರ್ಕಾರ ಈಗಾಗಲೇ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಎನ್ ಸಿಡಿ ಕ್ಲಿನಿಕ್‌ಗಳ 9000 ಸಬ್ ಸೆಂಟರ್ ಗಳು ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಇದಕ್ಕಾಗಿ 6000 ಸಿಎಚ್ ಒಗಳನ್ನು ನೇಮಕ ಮಾಡಲಾಗಿದೆ. ನಮ್ಮ ಕ್ಲಿನಿಕ್ ಗಳ ಸ್ಥಾಪನೆಯ ಮೂಲ ಉದ್ದೇಶವೂ ಇದಾಗಿದೆ. ಈ ಮೂಲಕ ಸಕ್ಕರೆ ಕಾಯಿಲೆ ಹೈಪರ್ ಟೆನ್ಷನ್ ಸೇರಿದಂತೆ ಎಲ್ಲಾ ಅಸಾಂಕ್ರಾಮಿಕ ರೋಗಿಗಳ ಚಿಕಿತ್ಸೆಗೆ ನೆರವು ನೀಡಲಾಗುತ್ತಿದೆ. ಅವರ ಡೇಟಾಗಳನ್ನು ಸಂಗ್ರಹಿಸಿ, ರೋಗಿಗಳ ಡಯಟ್, ಪೋಷಕಾಂಶಯುಕ್ತ ಆಹಾರ ಸೇವನೆ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಸ್ಟೋಕ್ ಆದಾಗ ಸಮಯ ಪ್ರಜ್ಞೆ ತುಂಬಾ ಪ್ರಮುಖ. ಡಾಕ್ಟರ್ ಹತ್ತಿರ ಹೇಗೆ ಮತ್ತು ಎಷ್ಟು ಬೇಗ ಹೋಗುತ್ತಿರಾ ಅನ್ನುವುದು ತುಂಬಾ ಮುಖ್ಯವಾಗುತ್ತದೆ. ಚಿಕಿತ್ಸೆ ಎಷ್ಟು ಬೇಗನೆ ಸಿಗುತ್ತದೆ ಅನ್ನುವುದೇ ನಿರ್ಣಾಯಕ. ವೈದ್ಯರು ಹಾಗೂ ಸಿಬ್ಬಂದಿಗಳು ರೋಗಿಯನ್ನು ಹಾಗೂ ಅವರ ಸಂಬಂಧಿಕರನ್ನು ನಿಭಾಯಿಸುವುದು ಕೂಡ ಪ್ರಮುಖವಾಗುತ್ತದೆ. ಆರೈಕೆ ಹಾಗೂ ಚಿಕಿತ್ಸೆ ಎರಡೂ ಕೂಡ ಸರಿಯಾದ ಕ್ರಮದಲ್ಲಿ ಹಾಗೂ ಸರಿಯಾದ ಸಮಯಕ್ಕೆ ಸಿಕ್ಕರೆ ಬೇಗನೆ ಗುಣಮುಖವಾಗಲು ಸಾಧ್ಯವಾಗುತ್ತದರೆ. ತಂತ್ರಜ್ಞಾನದ ಬಳಕೆ ಮೂಲಕ ಆರೋಗ್ಯ ಕರ್ನಾಟಕವನ್ನು ಕಟ್ಟಬೇಕಿದೆ ಎಂದು ಸಚಿವರು ಹೇಳಿದರು.
Key words: High-BP- controlled- physical-mental – dietary practices:-minister-Dr. K. Sudhakar,
ENGLISH SUMMARY…
High blood pressure can be prevented through healthy mental and physical activity and nutritious food: Karnataka Health Minister Dr K Sudhakar
There is an increase of hypertension cases among the middle class and poor
Bengaluru, October 22: We are witnessing an increase in the number of hypertension among the middle class and the poor. The deaths occuring due to non communicable diseases are higher than those being caused from communicable diseases, said Karnataka Health Minister Dr K Sudhakar.
Speaking at the Stroke Nursing Conclave 2022 event at Bangalore Medical College held on occasion of World Stroke Day, Minister Sudhakar said, “for various reasons, around 70% of hypertension cases are being seen among the middle class and those under the poverty line. This has been a rising concern and issue for underdeveloped and developing countries.”
October 29 is observed as the World Stroke Day and many countries around the world are constantly trying to find solutions to this issue. The surprising thing is that diabetes, hypertension and other non communicable diseases are causing more number of deaths than communicable diseases. Our government both at the Union and state level are taking measures to prevent this. It is better to prevent a disease rather than trying to cure it after you have get it. Hence, we from our government are focusing on creating awareness about such non communicable diseases.
Creating awareness among several sections of society including people below the poverty line, illiterate, people in rural areas and and those who don’t have much awareness about health is our challenge now. Doctors only provide treatment to stroke patients but they are cared for by nurses. It is the primary responsibility of nurses to properly care for, make the patient aware of the issue and emotionally strengthen the patient. This is what actually allows a patient to heal, Minister Sudhakar said.
The number of people getting hypertension is increasing in the country. India is gaining an infamous reputation of being the world’s diabetes capital. The main cause for stroke is hypertension and the number of hypertension cases we address directly causes the number of strokes to go down. If one lives a healthy lifestyle including good food habits, physical activity, care for mental health, a healthy social life can help one mitigate the risk for stroke.
The government is already conducting awareness programs. Over 9000 sub centers of NCD clinics have been established in the state currently and a total of 6000 CHOs have been appointed for this. This is also one of the main intentions of establishing the Namma Clinics. The Namma Clinics will offer screening and treatment for non-communicable diseases including hypertension. The Namma Clinics will also perform the task of collecting data about non-communicable diseases and offer advice on following a nutritious diet.
Time is very critical when it comes to stroke. It is important how quickly you reach a doctor. The deciding factor of what the patient’s condition will be is how fast he gets treatment. How the doctors and other personnel treat the patient and his family is also an important factor. If the patient receives proper and timely treatment, the chances of recovery and the time of recovery improves. We need to build Arogya Karnataka (healthy Karnataka) through the use of technology, Minister Sudhakar said.