ಬೆಂಗಳೂರು,ಸೆಪ್ಟಂಬರ್,7,2022(www.justkannada.in): ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಮಳೆ ನೀರು ತ್ಯಾಜ್ಯದಿಂದ ಚರಂಡಿಗಳು ತುಂಬಿ ಹೋಗಿವೆ. ಅವನ್ನು ಸರಿಪಡಿಸಲು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಬಿಬಿಎಂಪಿಗೆ ಹೈಕೋರ್ಟ್ ಪ್ರಶ್ನಿಸಿದೆ. ಹಾಗೆಯೇ ರಸ್ತೆಗಳಲ್ಲಿ ಮಳೆ ನೀರು ತುಂಬಿ ಮನೆಗಳಿಗೆ ನುಗ್ಗುತ್ತಿದೆ. ಜನರ ಕುಂದು ಕೊರತೆ ನಿವಾರಣೆಗೆ ಘಟಕ ಆರಂಭಿಸಲಾಗಿದೆಯೇ. ಸಮಸ್ಯೆ ಬಗೆಹರಿಸಲು ಮಾರ್ಗ ಹುಡುಕಿ. ವಾರ್ಡ್ ವಾರು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಿ ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಮುಂಗಾರಿಗೆ ಮುನ್ನ ಕೆರೆಗಳ ನೀರು ಹೊರ ಬಿಡಲು ಚಿಂತಿಸಲಾಗಿದೆ. ಇದಕ್ಕಾಗಿ ಕೆರೆಗಳಲ್ಲಿ ಗೇಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇದೇ ವೇಳೆ ಹೈಕೋರ್ಟ್ ಗೆ ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದರು. ವಾರ್ಡ್ ವಾರು ಕುಂದುಕೊರತೆ ನಿವಾರಣೆಗೆ ಘಟಕ ಆರಂಭಿಸಿ ಎಂದು ಸೂಚಿಸಿದ ಹೈ ಕೋರ್ಟ್ ಜುಲೈ 26ರೊಳಗೆ ಗುಂಡಿ ಮುಚ್ಚಲು ಕೈಗೊಂಡ ಕ್ರಮಗಳೇನು..? ಒಂದು ವಾರದಲ್ಲಿ ಈ ಬಗ್ಗೆ ಮಾಹಿತಿ ನೀಡುವಂತೆ ಹೇಳಿತು.
Key words: High Court – Bengaluru -rain – flood -situation.