ವಿವಿ ಸೆನೆಟ್ ಗೆ ಎಬಿವಿಪಿ ಸದಸ್ಯರ ನೇಮಕ ರದ್ದುಗೊಳಿಸಿದ ಹೈಕೋರ್ಟ್: ರಾಜ್ಯಪಾಲರಿಗೆ ಮುಖಭಂಗ.

ತಿರುವನ೦ತ ಪುರಂ,ಮೇ,23,2024 (www.justkannada.in):  ಕೇರಳ ವಿಶ್ವವಿದ್ಯಾಲಯದ ಸೆನೆಟ್‌ಗೆ ಮಾಡಲಾಗಿದ್ದ ನಾಲ್ವರು ಸದಸ್ಯರ ನಾಮನಿರ್ದೇಶನಗಳನ್ನು ಕೇರಳ ಹೈಕೋರ್ಟ್‌ ರದ್ದುಗೊಳಿಸಿದ್ದು, ಈ ಮೂಲಕ  ಕೇರಳ ಗವರ್ನರ್‌ ಆರಿಫ್‌ ಮೊಹಮ್ಮದ್‌ ಖಾನ್‌ಗೆ ಭಾರೀ ಮುಖಭಂಗವಾಗಿದೆ.

ಎಬಿವಿಪಿ ಜೊತೆ ನ೦ಟಿನ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದ ಸೆನೆಟ್‌ ಗೆ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ನಾಮನಿರ್ದೇಶನ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದ್ದವು. ಇದೀಗ ನಾಲ್ವರು ಸದಸ್ಯರ ನೇಮಕವನ್ನ ರದ್ದುಗೊಳಿಸಿದೆ.

ಕುಲಪತಿಯಾಗಿ ಸೆನೆಟ್‌ ಗೆ ನೇಮಕಾತಿಗಳನ್ನು ಮಾಡುವುದು ರಾಜ್ಯಪಾಲರ ವಿವೇಚನೆಯಾಗಿದೆ ಎ೦ಬ ವಾದವನ್ನು ತಿರಸ್ಕರಿಸಿರುವ ನ್ಯಾಯಾಲಯ, ಅಧಿಕಾರದ ಯಾವುದೇ ಅನಿಯಂತ್ರಿತ ಬಳಕೆಯು ಭಾರತದ ಸ೦ವಿಧಾನದ 14ನೇ ಪರಿಚ್ನೇದದಲ್ಲಿ ಪ್ರತಿಪಾದಿಸಲಾದ ಸಮಾನತೆ ನಿಯಮ ಮತ್ತು 16ನೇ ವಿಧಿಯಲ್ಲಿ ಅಂತರ್ಗತವಾಗಿರುವ ತಾರತಮ್ಯ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಸ್‌ಎಫ್‌ಐನ ಕೇರಳ ರಾಜ್ಯ ಕಾರ್ಯದರ್ಶಿ ಪಿಎಂ ಅರ್ಶೋ,  ಹೈಕೋರ್ಟ್ ನೀಡಿರುವ  ಆದೇಶ ಸ್ವಾಗತ. ಇದು ಕಾನೂನು ಮಾತ್ರವಲ್ಲದೆ ರಾಜ್ಯಪಾಲರು ತಮ್ಮ ಸಾಂವಿಧಾನಿಕ ಸ್ಥಾನವನ್ನು ರಾಜಕೀಯವಾಗಿ ಬಳಸಿಕೊ೦ಡಿದ್ದು, ಕೇರಳದ ಕ್ಯಾ೦ಪಸ್‌ ಗಳಲ್ಲಿ ಆರೆಸ್ಸೆಸ್‌ ಅಜಿ೦ಡಾವನ್ನು ಜಾರಿಗೆ ತರಲು ಮುಂದಾಗಿದ್ದರು, ಆದರೆ ಇದೀಗ ವಿಫಲರಾಗಿದ್ದಾರೆ ಎಂದು ತಿಳಿಸಿದರು.

Key words: High Court.cancels, appointment, ABVP