ಬೆಂಗಳೂರು,ಡಿಸೆಂಬರ್,4,2020(www.justkannada.in): ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಜೂನ್ 2020ರ ಸರ್ಕಾರ ಹೊರಡಿಸಿರುವ ಅಸೂಚನೆಯಂತೆ 198 ವಾರ್ಡ್‍ಗಳಿಗೆ ಚುನಾವಣೆ ನಡೆಸಲು ಒಂದು ತಿಂಗಳೊಳಗೆ ಮೀಸಲಾತಿ ಅಸೂಚನೆ ಹೊರಡಿಸಬೇಕು. ನಂತರ ಆರು ವಾರದೊಳಗೆ ಚುನಾವಣೆ ನಡೆಸಬೇಕು ಎಂದು ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಬಿಬಿಎಂಪಿ ಚುನಾವಣಾ ಮೀಸಲಾತಿ ಪಟ್ಟಿಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವಾರ್ಡ್ ಗಳ ಪುನರ್ ವಿಂಗಡಣೆಗೆ ಬ್ರೇಕ್ ಹಾಕಿದ್ದು, 198 ವಾರ್ಡ್ ಗಳಿಗೆ ಚುನಾವಣೆ ನಡೆಸುವಂತೆ ಸೂಚಿಸಿದೆ. ಹೀಗಾಗಿ 243 ವಾರ್ಡ್ ಗಳಿಗೆ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯಾದಂತೆ ಆಗಿದೆ.
ಶೀಘ್ರ ಚುನಾವಣೆ ನಡೆಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ವಿಚಾರಣೆ ನಡೆಸಿದ ನ್ಯಾಯಾಲಯ 2020ರ ಜೂನ್ ತಿಂಗಳಿನಲ್ಲಿ ಸರ್ಕಾರ ಹೊರಡಿಸಿದ ವಾರ್ಡ್ ಪುನರ್ ವಿಂಗಡಣೆಯಂತೆಯೇ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ.
english summary…
HC green signal for BBMP elections
Bengaluru, Dec. 4, 2020 (www.justkannada.in): The Hon’ble High Court has given a green signal to conduct the BBMP elections.
It has instructed BBMP to announce reservation details within one month, to conduct elections to 198 wards as per the notification issued by the government in June 2020.
After hearing the appeal regarding the BBMP election reservation list, the Hon’ble High Court has instructed to conduct the elections to all the 198 wards. The State Government’s decision to increase the number of wards to 243 has taken a setback as a result of the HC orders.
Keywords: BBMP elections/ High CourtHC green signal for BBMP elections
Key words: High court-green signal –BBMP- election.