ಬೆಂಗಳೂರು,ಆಗಸ್ಟ್,30,2022(www.justkannada.in): ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರಕ್ಕೆ ಸಂಬಂಧಿಸಿ ಸದನ ಸಮಿತಿ ರಚನೆ ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್, ಗಣೇಶ ಕೂರಿಸುವ ಬಗ್ಗೆ ನಿರ್ಧರಿಸುವ ಅಧಿಕಾರವನ್ನು ಹು-ಧಾ ಮಹಾನಗರ ಪಾಲಿಕೆ ಆಯುಕ್ತರಿಗೆ ನೀಡಿ ಆದೇಶಿದೆ.
ಮೈದಾನದಲ್ಲಿ ಗಣೇಶ ಕೂರಿಸುವುದು ಈಗ ಪಾಲಿಕೆ ಆಯುಕ್ತರಿಗೆ ಬಿಟ್ಟ ವಿಚಾರ. ಗಣೇಶೋತ್ಸವಕ್ಕೆ ಬರುವ ಅರ್ಜಿ ನಿರ್ಧರಿಸುವ ಅಧಿಕಾರವನ್ನು ಹೈಕೋರ್ಟ್ ಕಮಿಷನರ್ ಗೆ ನೀಡಿ ಆದೇಶಿಸಿದೆ. ಇದರಿಂದ ಈದ್ಗಾ ಗಣೇಶ ವಿವಾದ ಮತ್ತೆ ಗೊಂದಲಕ್ಕೆ ಬಿದ್ದಿದೆ.
Key words: High Court -green signal – Ganeshotsav -Eidga Maidan – Hubli.