ರಾಜ್ಯದ ನಾಲ್ವರು ಸೇರಿ 7 ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಶಿಫಾರಸು

ನವದೆಹಲಿ,ಏಪ್ರಿಲ್,21,2025 (www.justkannada.in):   ಏಳು ಮಂದಿ ಹೈಕೋರ್ಟ್ ನ್ಯಾಯಾಧೀಶರನ್ನ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

ಕರ್ನಾಟಕ ಹೈಕೋರ್ಟ್ ನಾಲ್ವರು ನ್ಯಾಯಧೀಶರನ್ನ ಅಂದರೇ ನ್ಯಾ. ಕೃಷ್ಣ ಎಸ್ ದೀಕ್ಷಿತ್,  ಕೃಷ್ಣನ್ ನಟರಾಜನ್,  ಸಂಜಯ್ ಗೌಡ,  ಹೇಮನ್ ಚಂದನಗೌಡರ್ ಅವರನ್ನ ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಲಾಗಿದೆ.

ವರ್ಗಾವಣೆ ಮಾಡಲು ಸೂಚಿಸಿರುವ  7ಮಂದಿಯ ಹೆಸರು ಹೀಗಿದೆ ನೋಡಿ

ಈ ಕೆಳಗಿನ ವರ್ಗಾವಣೆಗಳನ್ನು ಶಿಫಾರಸು ಮಾಡಲಾಗಿದೆ.

ನ್ಯಾಯಮೂರ್ತಿ ದೀಕ್ಷಿತ್ ಕೃಷ್ಣ ಶ್ರೀಪಾದ್: ಕರ್ನಾಟಕ ಹೈಕೋರ್ಟ್‌ನಿಂದ ಒರಿಸ್ಸಾ ಹೈಕೋರ್ಟ್‌ಗೆ

ನ್ಯಾಯಮೂರ್ತಿ ಕೃಷ್ಣನ್ ನಟರಾಜನ್: ಕರ್ನಾಟಕ ಹೈಕೋರ್ಟ್‌ನಿಂದ ಕೇರಳ ಹೈಕೋರ್ಟ್‌ಗೆ.

ನ್ಯಾಯಮೂರ್ತಿ ಹೇಮನ್ ಚಂದನಗೌಡರ್: ಕರ್ನಾಟಕ ಹೈಕೋರ್ಟ್‌ನಿಂದ ಮದ್ರಾಸ್ ಹೈಕೋರ್ಟ್‌ಗೆ.

ನ್ಯಾಯಮೂರ್ತಿ ನೆರನಹಳ್ಳಿ ಶ್ರೀನಿವಾಸನ್: ಕರ್ನಾಟಕ ಹೈಕೋರ್ಟ್‌ನಿಂದ ಗುಜರಾತ್ ಹೈಕೋರ್ಟ್‌ಗೆ.

ನ್ಯಾಯಮೂರ್ತಿ ಪೆರುಗು ಶ್ರೀ ಸುಧಾ: ತೆಲಂಗಾಣ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ

ನ್ಯಾಯಮೂರ್ತಿ ಕೆ ಸುರೇಂದರ್: ತೆಲಂಗಾಣ ಹೈಕೋರ್ಟ್‌ನಿಂದ ಮದ್ರಾಸ್ ಹೈಕೋರ್ಟ್‌ಗೆ

ನ್ಯಾಯಮೂರ್ತಿ ಡಾ. ಕುಂಭಜದಲ ಮನ್ಮಧ ರಾವ್: ಆಂಧ್ರಪ್ರದೇಶ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ ಗೆ ವರ್ಗಾವಣೆಗೆ ಶಿಫಾರಸ್ಸು ಮಾಡಿದೆ.

Key words: Recommendation, transfer, 7 High Court,  judges, Supreme court