ರಾಮನಗರ,ನವೆಂಬರ್,30,2023(www.justkannada.in): ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಡಿಕೆ ಡಿಕೆ ಶಿವಕುಮಾರ್ ಗೆ ಹೈಕೋರ್ಟ್ ರಿಲೀಫ್ ನೀಡಿಲ್ಲ. ಅವರೇ ರಿಲೀಫ್ ತೆಗೆದುಕೊಂಡಿದ್ದಾರೆ. ಸಿಬಿಐ ತನಿಖೆ ಸ್ವಲ್ಪ ಮುಂದಕ್ಕೆ ಎಳೆಯುವ ಸಲವಾಗಿ ಇದು ಡಿಕೆಶಿ ಅವರ ತಂತ್ರವಷ್ಟೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಐದಾರು ಗ್ಯಾರಂಟಿ ಮೂಲಕ ದೇಶದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತಾ ತಿಳಿದಿದ್ದಾರೆ. ಸಿಬಿಐ ತನಿಖೆ ಸ್ವಲ್ಪ ಮುಂದಕ್ಕೆ ಎಳೆಯುವ ಸಲವಾಗಿ ಈ ರೀತಿ ಮಾಡಿದ್ದಾರೆ. ಮುಂದೆ ನಾವೇ ಆಧಿಕಾರಕ್ಕೆ ಬರುತ್ತೇವೆ ಅಮೇಲೆ ಕೇಸ್ ಮುಚ್ಚಿ ಹಾಕಬಹುದು ಎಂದು ತಿಳಿದಿದ್ದಾರೆ. ಇದೆಲ್ಲಾ ಡಿಕೆ ಶಿವಕುಮಾರ್ ತಂತ್ರಗಾರಿಕೆ ಅಷ್ಟೆ ಎಂದರು.
ನಾನು ವಕೀಲನಾಗಿದ್ದಕ್ಕೆ ಕೇಸ್ ತನಿಖೆ ಹಿಂಪಡೆದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ದೊಡ್ಡ ವಕೀಲರು ಅಂತಾ ನನಗೆ ಗೊತ್ತು ಅರ್ಕಾವತಿ ಡಿನೋಟಿಫಿಕೇಷನ್ ರೀಡೋ ಮಾಡಿದ್ದೂ ಗೊತ್ತು . ಜನಸಾಮಾನ್ಯರಿಗೊಂದು ನ್ಯಾಯ ಇವರಿಗೊಂದು ನ್ಯಾಯಾನಾ ಎಂದು ಪ್ರಶ್ನಿಸಿದರು.
Key words: High Court – not give -relief – DK Shivakumar – former CM -HD Kumaraswamy.