ಬೆಂಗಳೂರು,ನವೆಂಬರ್,13,2020(www.justkannada.in): ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿಗೆ ಹೈಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿ ಅದೇಶಿಸಿದೆ.
ಕೊರೋನಾ ಹಿನ್ನೆಲೆ ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದಕ್ಕೆ ನಿಷೇಧ ಹೇರಿದ್ದ ರಾಜ್ಯ ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿತ್ತು. ಆದರೆ ಎಲ್ಲಾ ಪಟಾಕಿಗಳನ್ನ ನಿರ್ಬಂಧಿಸುವಂತೆ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿತ್ತು.
ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಹಸಿರು ಪಟಾಕಿಗೆ ಷರತ್ತುಬದ್ಧ ಅನುಮತಿ ನೀಡಿ ಆದೇಶ ಹೊರಡಿಸಿದೆ. ಪೊಲೀಸರು ಮಳಿಗೆಗಳಿಗೆ ಭೇಟಿ ನೀಡಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಲಾಗುತ್ತದೆಯೋ ಎಂಬುದನ್ನ ಪರಿಶೀಲನೆ ನಡೆಸಬೇಕು. ಬೇರೆ ಪಟಾಕಿಗಳು ಬಳಕೆಯಾಗದಂತೆ ಕ್ರಮ ವಹಿಸಬೇಕು. ಜತೆಗೆ ಶಬ್ದಮಾಲೀನ್ಯ ಮತ್ತು ವಾಯುಮಾಲಿನ್ಯವನ್ನು ಅಳೆಯಬೇಕು ಎಂದು ಸರ್ಕಾರ ಮತ್ತು ಸ್ಥಳೀಯಾಡಳಿತಕ್ಕೆ ನಿರ್ದೇಶನ ನೀಡಿದೆ.
ಹಾಗೆಯೇ ಹೈಕೋರ್ಟ್ಆದೇಶ ಜಾರಿಗೊಳಿಸಿದ ಬಗ್ಗೆ ಸರ್ಕಾರ ಮತ್ತು ಬಿಬಿಎಂಪಿ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
English summary…
With condition HC permits green crackers
Bengaluru, Nov. 13, 2020 (www.justkannada.in): The Hon’ble High Court of Karnataka has allowed firing of green crackers based on certain conditions during this Deepavali celebrations.
After hearing the PIL trial on prohibiting all types of crackers, the Hon’ble court has permitted sale and firing of green crackers. It has also asked the Police to visit all the stalls selling crackers and ensure that only green crackers are being sold and take precautions to prevent sale of other crackers.
It has also directed the local administration to assess the sound and air pollution levels and asked the Government and BBMP to submit a report regarding implementation of court orders.
Key words: High Court -onditional sanction – green- fireworks.